ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೆಂಬರ್ ಮಂಜೂರಾತಿ ಪತ್ರ ಹಸ್ತಾಂತರ

0

ನಾರಾವಿ: ವಲಯದ ಸುಲ್ಕೇರಿ ಕಾರ್ಯಕ್ಷೇತ್ರದ ಮುಳ್ಳಗುಡ್ಡೆ ಎಂಬಲ್ಲಿ ರಚನೆಗೊಳ್ಳುತ್ತಿರುವ ಹಿಂದೂರುದ್ರಭೂಮಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1,60,000 ಮೌಲ್ಯದ ಸಿಲಿಕಾನ್ ಚೆಂಬರ್ ಮಂಜೂರಾತಿ ಆಗಿದ್ದು ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಅಶೋಕ ಬಿ. ಹಾಗೂ ನಿವೃತ್ತ ನಿರ್ದೇಶಕ ವಿಶ್ವನಾಥ ಶೆಟ್ಟಿ ಸುಲ್ಕೇರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೊರಗಪ್ಪ ನಾಯ್ಕರಲ್ಲಿ ಹಸ್ತಾಂತರ ಮಾಡಲಾಯಿತು.

ಪಂಚಾಯತ್ ಉಪಾಧ್ಯಕ್ಷ ಶುಭಕರ ಪೂಜಾರಿ, ಸದಸ್ಯರಾದ ನಾರಾಯಣ ಪೂಜಾರಿ, ಪ್ರೇಮ, ರವಿ, ಪಂಚಾಯತ್ ಸಿಬ್ಬಂದಿಯಾದ ದಿನೇಶ, ಸುಪ್ರಿಯಾ, ಭಾಸ್ಕರ, ಗ್ರಾಮ ಸಮಿತಿ ಅಧ್ಯಕ್ಷ ರಾಮಶೆಟ್ಟಿ, ಜನ ಜಾಗೃತಿ ಸದಸ್ಯ ಸದಾನಂದ ಗೌಡ, ಒಕ್ಕೂಟದ ಉಪಾಧ್ಯಕ್ಷ ಕೀರ್ತನ್ ಪೂಜಾರಿ, ವಿಪತ್ತು ಸಂಯೋಜಕ ದಿನೇಶ ಶೆಟ್ಟಿ, ವಲಯದ ಮೇಲ್ವಿಚಾರಕ ವಿಶಾಲ ಕೆ. ಸೇವಾಪ್ರತಿನಿಧಿ ಮಮತ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here