ಗುರುವಾಯನಕೆರೆ: ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರು ಡಿ. 26 ರಂದು ಬೆಳ್ತಂಗಡಿಯ ಗುರುವಾಯನಕೆರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕೆರೆ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿ ನ್ಯೂಸ್ ಜೊತೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಕೆರೆಯ ಬಗ್ಗೆ ಈಗಾಗಲೇ ದೂರು ಬಂದಿದೆ. ಇಲ್ಲಿ ಹತ್ತು ವರ್ಷದಿಂದ ಹೂಳೆತ್ತುವ ಕೆಲಸ ಆಗಿಲ್ಲ. ಆದಷ್ಟು ಬೇಗ ಹೂಳೆತ್ತುವ ಕೆಲಸ ಆಗಬೇಕು. ಬೇಲಿ ಹಾಕುವ ಕೆಲಸ ಆಗಬೇಕು ಎಂದು ಹೇಳಿದರು. ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಕೂಡ ಹೌದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಸ್ಥಳದಲ್ಲಿಯೇ ತಹಶೀಲ್ದಾರ್ ಪೃಥ್ವಿ ಸಾನಿಕಂರಿಗೆ ಸೂಚನೆ ಕೊಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರು ತಕ್ಷಣ ರೀ ಸರ್ವೆ ಮಾಡಿ ಕೆರೆ ಒತ್ತುವರಿ ಬಗ್ಗೆ ಮಾಹಿತಿ ಕಲೆ ಹಾಕಬೇಕು ಎಂದು ಹೇಳಿದರು.
ಹೂಳೆತ್ತುವ ಕೆಲಸ ಮಾಡುತ್ತೇವೆ: ಬಳಿಕ ಸುದ್ದಿ ಜೊತೆ ಮಾತನಾಡಿದ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ಸರ್ವೆ ಮಾಡಿ ಎಸ್ಟಿಮೇಷನ್ ತಯಾರು ಮಾಡಿ ಹೂಳೆತ್ತುವ ಕೆಲಸ ಮಾಡುತ್ತೇವೆ.
ಅದರ ಜೊತೆ ಒತ್ತುವರಿ ಕುರಿತಾಗಿಯೂ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ದಿಢೀರ್ ಭೇಟಿ-ಗುರುವಾಯನಕೆರೆಯಲ್ಲಿ ಕೆರೆ ಪರಿಶೀಲನೆ
p>