p>
ಬೆಳ್ತಂಗಡಿ: ಪಣಕಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಹರೀಶ್ ಪೂಜಾರಿ, ಉಪಾಧ್ಯಕ್ಷರಾಗಿ ಸಿರಿಲ್ ಸಿಕ್ವೇರಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರಾಗಿ ಪದ್ಮನಾಭ ಶೆಟ್ಟಿ, ಲೂಸಿ ಡಿ’ಸೋಜಾ, ಗಣೇಶ್ ಪ್ರಭು, ಮೈಕಲ್ ಡಿ’ಸೋಜಾ, ಅರುಣ್ ಬಂಗೇರ, ದಿನೇಶ್ ಪ್ರಭು, ಕೇಶವ ಮೂಲ್ಯ, ಭವ್ಯ, ಚಂದ್ರ ಮತ್ತು ಶಿವರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ.