ಬೆಳ್ತಂಗಡಿ: ಜ. 2 ತಾಲೂಕಿನ ವಿವಿಧ ಕಡೆ ಮಳೆಯಿಂದ ಹಾನಿಗೀಡಾದ ಪ್ರದೇಶದಲ್ಲಿ ಗ್ರಾಮೀಣ ಜನತೆಯ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ನಾನು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಪ್ರಕಾರ ಕರ್ನಾಟಕ ಸರಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ಈ ಕೆಳಗಿನ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದೆಯೆಂದು ಶಾಸಕ ಹರೀಶ್ ಪೂಂಜ ತಿಳಿಸಿರುತ್ತಾರೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮರಕಡದಿಂದ ಪುದುವೆಟ್ಟು ಗ್ರಾಮದ ಮಿಯ್ಯಾರು ಸಂಪರ್ಕ ರಸ್ತೆ ಅಭಿವೃದ್ಧಿ – ರೂ. 4.00 ಕೋಟಿ, ಧರ್ಮಸ್ಥಳ – ತೋಟತ್ತಾಡಿ – ಚಿಬಿದ್ರೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ – ರೂ. 2.00 ಕೋಟಿ, ಪುಯ್ಯ – ಉಳಿಯ – ಕಂಚಿನಡ್ಕ – ಮುರ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ – ರೂ.1.00 ಕೋಟಿ, ನಾರಾವಿ – ಪಾಣಾಲು – ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ – ರೂ.1.00 ಕೋಟಿ, ಧರ್ಮಸ್ಥಳ – ಮುಂಡಾಜೆ ರಸ್ತೆಯಲ್ಲಿ ಆಯ್ದ ಭಾಗಗಳಲ್ಲಿ ಸೇತುವೆ ನಿರ್ಮಾಣ – ರೂ. 3.75 ಕೋಟಿ, ಉಜಿರೆ – ಇಂದಬೆಟ್ಟು ರಸ್ತೆಯ ಅಂಬಡಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣ – ರೂ. 2.50 ಕೋಟಿ. ಬಿಡುಗಡೆಗೊಂಡಿದ್ದು ಶೀಘ್ರವೇ ಕಾಮಗಾರಿ ಚಾಲನೆಯಾಗಲಿದೆಯೆಂದು ಶಾಸಕರು ತಿಳಿಸಿರುತ್ತಾರೆ.