ರಾಮನಗರ: ನಗರ ಭಜನೆ ಮಂಗಲೋತ್ಸವ – ಪಂಚಶ್ರೀ ಮಹಿಳಾ ತಂಡದಿಂದ ಭಜನಾ ಕಾರ್ಯಕ್ರಮ

0

p>

ಬಳಂಜ: ತಾಲೂಕಿನ ಹೆಸರಾಂತ ಮಹಿಳಾ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಪಂಚಶ್ರೀ ಮಹಿಳಾ ಭಜನಾ ಮಂಡಳಿ ಸದಸ್ಯರು ನಾಲ್ಕೂರು ಗ್ರಾಮದ ರಾಮನಗರ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಡಿ. 31 ರಂದು ನಡೆದ ನಗರ ಭಜನಾ ಮಂಗಲೋತ್ಸವದಲ್ಲಿ ಭಾಗವಹಿಸಿ ಭಜನಾ ಕಾರ್ಯಕ್ರಮ ನೀಡಿದರು.

ಈಗಾಗಲೇ ಜಿಲ್ಲೆಯ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಂಚಶ್ರೀ ಮಹಿಳಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ದಾಸ ಸಾಹಿತ್ಯದ ಶುಶ್ರಾವ್ಯ ಭಕ್ತಿ ಗೀತೆಗಳನ್ನು ಭಜನೆಯ ಮೂಲಕ ಹಾಡುತ್ತಿದ್ಫು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪುಷ್ಪಾ ಗಿರೀಶ್ ರವರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಮಂಡಳಿಯಲ್ಲಿ 25ಕ್ಕೂ ಹೆಚ್ಚು ಸದಸ್ಯರಿದ್ದು ವಿಶಾಲ ಜಗದೀಶ್, ಭಾರತಿ ಸಂತೋಷ್, ಚಿತ್ರಾ ಹೆಗ್ಡೆ, ಅನುಷಾ ಸೇರಿದಂತೆ ಪಂಚಶ್ರೀ ಮಹಿಳಾ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಪಂಚಶ್ರೀ ಮಕ್ಕಳ ಕುಣಿತ ಭಜನಾ ತಂಡದ ತರಬೇತಿಯು ಸಹ ನಡೆಯುತ್ತಿದ್ದು ಸಮಾಜ ಸೇವಕರಾದ ಸುನಿಲ್ ಶೆಟ್ಟಿ, ಖಂಡಿಗ ಸಂಜೀವ ಶೆಟ್ಟಿ, ಪುಷ್ಪಾ ಗಿರೀಶ್ ಹಾಗೂ ಸದಸ್ಯರು ಸಹಕಾರವನ್ನು ನೀಡುತ್ತಿದ್ದಾರೆ.

ಪಂಚಶ್ರೀ ಮಹಿಳಾ ಸದಸ್ಯರ ನೇತೃತ್ವದಲ್ಲಿ ಈಗಾಗಲೇ ಸ್ವಾಮಿ ಬೊಲ್ಲಜ್ಜ ಹಾಗೂ ಕುತ್ತಿಲದ ಬೋಲ್ಪು ಎಂಬ ಭಕ್ತಿ ಗೀತೆಗಳು ದ್ವನಿ ಮುದ್ರಿತಗೊಂಡಿದೆ.

LEAVE A REPLY

Please enter your comment!
Please enter your name here