ಬಳಂಜ: ಶ್ರೀ ಧರ್ಮರಸು ಕೊಡಮಣಿತ್ತಾಯ ಸಪರಿವಾರ ದೈವಗಳ ಸೇವಾ ಟ್ರಸ್ಟ್, (ರಿ)ಬೋಂಟ್ರೋಟ್ಟು ಗುತ್ತು ಇವರ ನೇತೃತ್ವದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ, ಕಲಶಾಭಿಷೇಕ ಹಾಗೂ ಧರ್ಮರಸು, ಕೊಡಮಣಿತ್ತಾಯ, ಅಂಗಣ ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಡಿ. 31 ರಂದು ಬೋಂಟ್ರೋಟ್ಟು ಗುತ್ತಿನಲ್ಲಿ ನಡೆಯಿತು.
ಮಧ್ಯಾಹ್ನದ ಪೂಜೆಯ ಸಂದರ್ಭದಲ್ಲಿ ದೈವಸ್ಥಾನಕ್ಕೆ ಗರುಡ ಪಕ್ಷಿಯೊಂದು ಪ್ರದಕ್ಷಿಣೆ ಹಾಕಿದ್ದು, ಇಲ್ಲಿನ ಕ್ಷೇತ್ರದ ಶಕ್ತಿಯನ್ನು ಉದ್ದಿಪನಗೊಳಿಸಿದ್ದು, ಸೇರಿದ್ದ ಭಕ್ತರಿಗೆ ಅಚ್ಚರಿ ಮೂಡಿಸಿದೆ. ಸಂಜೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಸೇರಿದ್ದರು.
ಟ್ರಸ್ಟ್ ನ ಅಧ್ಯಕ್ಷ ಹರೀಶ್. ಕೆ. ಬೈಲಬರಿ, ಹಿರಿಯರಾದ ಮಹಾಬಲ ಪೂಜಾರಿ, ಕೃಷ್ಣಪ್ಪ ಪೂಜಾರಿ, ಸದಾನಂದ ಪೂಜಾರಿ, ಬೋಂಟ್ರೋಟ್ಟು ಗುತ್ತು ಗುರಿಕಾರರಾದ ಗಣೇಶ್ ಪೂಜಾರಿ, ಟ್ರಸ್ಟ್ ನ ಕಾರ್ಯದರ್ಶಿ ಸಂತೋಷ್ ಪಿ. ಕೋಟ್ಯಾನ್, ಕೋಶಾಧಿಕಾರಿ ಪ್ರವೀಣ್ ಕುಮಾರ್ ಎಚ್. ಎಸ್. ಹಾಗೂ ಟ್ರಸ್ಟ್ ನ ಎಲ್ಲಾ ಸದಸ್ಯರು, ಬೋಂಟ್ರೋಟ್ಟು ಗುತ್ತು ಕುಟುಂಬಸ್ಥರು, ಊರಿನ ಗಣ್ಯರು ಉಪಸ್ಥಿತರಿದ್ದರು.