ಶಿರ್ಲಾಲು: ಶಿರ್ಲಾಲು, ನಲ್ಲಾರು, ಕರಂಬಾರು ಗ್ರಾಮಗಳ ಕೂಡುವಿಕೆಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬಂತಡ್ಕ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಜಾತ್ರೆ ಜ. 4 ರಿಂದ 6 ರವರೆಗೆ ನಡೆಯಲಿದೆ.
ಜ. 4 ರಂದು ರಾತ್ರಿ ಮಹಮ್ಮಾಯಿ ಪೂಜೆ, ಜ. 5 ರಂದು ರಾತ್ರಿ ಕರ್ದೋಟ್ಟುವಿನಿಂದ ದೈವದ ಭಂಡಾರ ಬರುವುದು. ಕರಂಬಾರು ಗ್ರಾಮದ ಕಲ್ಲಾಜೆಯಿಂದ ಕೊಡಮಣಿತ್ತಾಯ ಭಂಡಾರ ಬರುವುದು, ನಲ್ಲಾರಿನಿಂದ ಬೈದರ್ಕಳ ಬಂಡಾರ ಬರುವುದು ಬಳಿಕ ಶಿರ್ಲಾಲು ಮತ್ತು ಕರಂಬಾರು ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಮತ್ತು ದಿ. ಕೇಶವ ಬಂಗೇರ ಸುರ್ಲೊಡಿ ಸ್ಮರಣಾರ್ಥ ಧ್ವನಿಶ್ರೀ ಮೆಲೋಡಿ ಮಂಗಳೂರು ಇವರಿಂದ ಸಂಗೀತ ರಸಮಂಜರಿ, ರಾತ್ರಿ 2 ರಿಂದ ದೈವ ಮತ್ತು ಕೊಡಮನಣಿತ್ತಾಯ ನೇಮ
ಜ. 6 ರಂದು ರಾತ್ರಿ 7 ರಿಂದ ಕಾಪಿಕಾಡ್ ವಾಮಂಜೂರು ಸಾಯಿ ಅಭಿನಯದ ನಾಟಕ ಏರ್ಲಾ ಗ್ಯಾರಂಟಿ ಅತ್ತ್
ರಾತ್ರಿ 10 ರಿಂದ ಶ್ರೀ ಬ್ರಹ್ಮ ಬೈದರ್ಕಳ ನೇಮ, ಮುಂಜಾನೆ 4 ರಿಂದ ಮಾಣಿಬಾಲೆ ನೇಮ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಪದ್ಧರಬೈಲು, ಪ್ರಧಾನ ಕಾರ್ಯದರ್ಶಿ ಎಂ. ಕೆ. ಪ್ರಸಾದ್, ಜಾತ್ರಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಕರಂಬಾರು, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಸುದಲಾಯಿ, ಕೋಶಾಧಿಕಾರಿ ಪ್ರತಾಪ್ ಕಲ್ಲಾಯಿ ತಿಳಿಸಿದ್ದಾರೆ.