ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೆ ಭಜನೋತ್ಸವ ಸಂಪನ್ನ

0

ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೆ-ಭಜನೋತ್ಸವ ಅ.11 ರಿಂದ ಪ್ರಾರಂಭಗೊಂಡು ಅ. 20 ವರೆಗೆ ವೇ.ಮೂ. ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ಮಾರ್ಗದರ್ಶನದಲ್ಲಿ, ವೇ. ಮೂ. ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ನಡೆಯಿತು.ಪ್ರತಿದಿನ ಮಧ್ಯಾಹ್ನ ಮಹಾ ಪೂಜೆ, ರಾತ್ರಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಅನ್ನಸಂತರ್ಪಣೆ ನೆರವೇರಿತು.

ಭಜನಾ ಸೇವೆಯನ್ನು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶ್ರೀ ಕ್ಷೇತ್ರ ನಾಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ತಾರೆಮಾರು ಮಚ್ಚಿನ, ಶ್ರೀ ದುರ್ಗಾ ಭಜನಾ ಮಂಡಳಿ ಬೊಳ್ಳುಕಲ್ಲು, ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಭಜನಾ ಮಂಡಳಿ ಮೈರಳಿಕೆ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಪಿಲಿಗೂಡು,ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೆಲ್ಲಿಕಟ್ಟೆ, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ರಕ್ಷೇಶ್ವರಿ ಪದವು, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಓಡಿಲು, ಶ್ರೀರಾಮ ಮಕ್ಕಳ ಕುಣಿತ ಭಜನಾ ತಂಡ ಮಲೆಬೆಟ್ಟು ಕೊಯ್ಯೂರು, ಶ್ರೀ ದುರ್ಗಾ ಭಜನಾ ಮಂಡಳಿ ಕಣ್ಣಾಜೆ ಲ್ಯಾಲ, ಶ್ರೀ ದುರ್ಗಾ ಭಕ್ತಿ ಭಜನೆ ನಾಳ, ಶ್ರೀ ಲಕ್ಷ್ಮೀ ಮಹಿಳಾ ಭಜನಾ ವೃಂದ ಅಜಿತ್ ನಗರ ಉಜಿರೆ, ಲಕ್ಷ್ಮಿ ಮಕ್ಕಳ ಕುಣಿತ ಭಜನಾ ತಂಡ ನಡ, ಶ್ರೀ ಉಮಾ ಮಹೇಶ್ವರ ಭಜನಾ ಮಂಡಳಿ, ಮಲೆಂಗಲ್ಲು, ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಪೆರ್ಡೂರು, ಶ್ರೀ ಕೃಷ್ಣ ಭಜನಾ ಮಂಡಳಿ ಗೇರುಕಟ್ಟೆ, ಮಾತೃಶ್ರೀ ಅನಂತೇಶ್ವರ ಮಹಿಳಾ ಕುಣಿತ ಭಜನಾ ಮಂಡಳಿ ಅನಂತೋಡಿ ಬೆಳಾಲು, ಶ್ರೀ ಜನಾರ್ದನ ಸ್ವಾಮಿ ಕುಣಿತ ಭಜನಾ ಮಂಡಳಿ ಉಜಿರೆ, ಬಾಲ ವಿಕಾಸ ಭಜನಾ ಮಂಡಳಿ ಹೊಸಬೆಟ್ಟು ಮೊದಲಾದ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಅ 19 ರಂದು ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಮಂಡಳಿ ನಾಳ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಪೌರಾಣಿಕ ಪ್ರದರ್ಶನ’ ನಡೆಯಿತು. ಅ.20ರಂದು ಆಯುಧ ಪೂಜೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಹರೀಶ್ ಕುಮಾರ್ಮತ್ತು ಸದಸ್ಯರು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡಹಾಗೂ ಸದಸ್ಯರು ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಮಮತಾ ಆಳ್ವ ಮತ್ತು ಸದಸ್ಯರು ಭಜನಾ ಮಂಡಳಿಯ ಅಧ್ಯಕ್ಷ ಗಣೇಶ ಗೌಡ ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಪ್ರತಿ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here