p>
ಮೇಲಂತಬೆಟ್ಟು: ಮುಂಡೂರು ನಿವಾಸಿ ಸಸಿಹಿತ್ಲು ಮೇಳದ ಯಕ್ಷಗಾನ ಕಲಾವಿದ ಪ್ರವಿತ್ ಕುಮಾರ್ ಆಚಾರ್ಯ (22ವ) ಅರ್ಕುಳ ಸಮೀಪ ನಡೆದ ಅಪಘಾತದಲ್ಲಿ ಮೃತರಾಗಿದ್ದಾರೆ.
ಇವರು ವಿಟ್ಲದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಬೆಳ್ತಂಗಡಿಯ ಮುಂಡೂರಿನ ಪರಂಬುಡೆಯ ಶೇಖರ ಆಚಾರ್ಯ ಹಾಗೂ ಭಾರತಿ ಆಚಾರ್ಯರ ಪುತ್ರನಾಗಿದ್ದಾರೆ. ಅರ್ಕುಳದಲ್ಲಿ ಬೈಕ್ ಮತ್ತು ಐಸ್ ಕ್ರೀಮ್ ಸಾಗಾಟದ ಗಾಡಿ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಮೃತರಾಗಿದ್ದಾರೆ.