ಈಚರ್ ಲಾರಿ – ಬೈಕ್ ನಡುವೆ ಅಪಘಾತ – 6 ವರ್ಷದ ಮಗು ಶಾಝಿನ್ ಸ್ಥಳದಲ್ಲೆ ಮೃತ್ಯು

0

p>

ಬೆಳ್ತಂಗಡಿ: ಈಚರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ವರ್ಷದ ಮಗು ಮೃತಪಟ್ಟಿದ್ದು, ತಂದೆ-ತಾಯಿ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಡಿ. 28 ರಂದು 6.30 ರ ವೇಳೆಗೆ ಸಂಭವಿಸಿದೆ.

ಮೃತ ಮಗುವನ್ನು ಬೆಳ್ತಂಗಡಿ ತಾಲೂಕಿನ ನಾವೂರು ಸಮೀಪದ ಮುರ ನಿವಾಸಿ ಅಬ್ದುಲ್ ಸಲೀಂರವರ ಹಿರಿಯ ಪುತ್ರ ಶಾಝಿನ್ (6 ವ) ಎಂದು ಹೆಸರಿಸಲಾಗಿದೆ.

ಸಲೀಂ ಅವರು ತನ್ನ ಪತ್ನಿ- ಮಕ್ಕಳೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಗಡಿಯಾರ ಎಂಬಲ್ಲಿ ಈಚರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಬೈಕಿನಲ್ಲಿದ್ದ 6 ವರ್ಷದ ಮಗು ಶಾಝಿನ್ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದು ಬಂದಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಗಾಯಗೊಂಡ ಅಬ್ದುಲ್ ಸಲೀಂ, ಅವರ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here