ಬೆಳ್ತಂಗಡಿ: ಗುರುವಾಯನಕೆರೆಯ ನಿಸರ್ಗ ರಮಣೀಯ ಪ್ರದೇಶದಲ್ಲಿ ಮೈದಳೆದು ನಿಂತ ಎಕ್ಸೆಲ್ ಪದವಿಪೂರ್ವ ಕಾಲೇಜು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಎಕ್ಸೆಲ್ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಲು ಹೊರಟವರಿಗೆ ಸುಯೋಗ್ಯ ಆಯ್ಕೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ.
ವಿದ್ಯಾಸಂಸ್ಥೆಯ ರೂವಾರಿ ಸುಮಂತ್ ಕುಮಾರ್ ಜೈನ್ ಅವರು ದಶಕಗಳಿಗೂ ಮೀರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಂಪೂರ್ಣ ಅನುಭವ ಹೊಂದಿದವರು. ನೀಟ್, ಸಿಇಟಿ ಪರೀಕ್ಷೆಗಳ ತರಬೇತುದಾರರಾಗಿ ರಾಜ್ಯಾದ್ಯಂತ ಸುತ್ತಾಡಿ ಖ್ಯಾತಿ ಪಡೆದವರು. ಅನುಭವಿ ಉಪನ್ಯಾಸಕರು ಸ್ಥಾಪಿಸಿದ ವಿದ್ಯಾ ಸಂಸ್ಥೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ದೇಶಾದ್ಯಂತ ಕೀರ್ತಿ ಗಳಿಸಿದೆ.
ಎಕ್ಸೆಲ್‌ನ ಹೆಗ್ಗಳಿಕೆ: ಪದವಿ ಪೂರ್ವ ಕಾಲೇಜು-ಪಿಯುಸಿ ಬೋರ್ಡ್ ಪರೀಕ್ಷೆಗಳಲ್ಲಿ ಉನ್ನತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಳಗೊಂಡು ಆಧುನಿಕ ವೃತ್ತಿಪರ ಕೋರ್ಸ್‌ಗಳಿಗೆ ಸುಲಭ ಪ್ರವೇಶಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಇದಲ್ಲದೆ ಬಿ.ಎಸ್ಸಿ, ಆಗ್ರಿಕಲ್ಚರ್, ಫಾರೆನ್ಸಿಕ್ ಸೈನ್ಸ್, ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪರೀಕ್ಷೆಗಳಿಗೂ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಅದ್ವಿತೀಯ ಸಾಧನೆ ಮಾಡಿ ಎಕ್ಸೆಲ್‌ನ ಕೀರ್ತಿ ಪತಾಕೆಯನ್ನು ಗಗನದೆತ್ತರಕ್ಕೆ ಹಾರಿಸಿದ್ದಾರೆ. 720 ಅಂಕಗಳ ನೀಟ್‌ನಲ್ಲಿ 710 ಪಡೆದ ಪಜ್ವಲ್ ಎಚ್.ಎಂ., 692 ಪಡೆದ ಆದಿತ್ ಜೈನ್, 689 ಪಡೆದ ರಾಹುಲ್ ಮತ್ತು 649 ಅಂಕ ಪಡೆದ ಸಂಜನಾ ಅವರ ಸಾಧನೆ ಅಮೋಘ. ಸರ್ಕಾರಿ ವೈದ್ಯಕೀಯ ಸೀಟುಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಪಡೆದ ವಿದ್ಯಾಸಂಸ್ಥೆ ಹೆಗ್ಗಳಿಕೆ ಕೂಡ ಎಕ್ಸೆಲ್‌ನದ್ದಾಗಿದೆ.
ರ್‍ಯಾಂಕ್ ಪಡೆದ ಹಿರಿಮೆ: ಫಾರೆನ್ಸಿಕ್ ಸೈನ್ಸ್ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಅರ್ಹರಾಗಿರುವುದು ವಿಶೇಷ. ೨೦೨೩-೨೪ನೇ ಪರೀಕ್ಷೆಯಲ್ಲಿ ಒಟ್ಟು 445 ವಿದ್ಯಾರ್ಥಿಗಳ ಪೈಕಿ 357 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಉಳಿದ 88 ವಿದ್ಯಾರ್ಥಿಗಳು ಪಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದರೊಂದಿಗೆ ರಾಜ್ಯ ಮಟ್ಟದ ಮೊದಲ 10 ರ್‍ಯಾಂಕ್‌ಗಳನ್ನು ಪಡೆದ ಹಿರಿಮೆ ಸಂಸ್ಥೆಯದ್ದಾಗಿದೆ. ಇಬ್ಬರು ವಿದ್ಯಾರ್ಥಿಗಳು ೬೦೦ ಅಂಕಗಳ ಪೈಕಿ 597 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ದ್ವಿತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಕ್ಕಳ ಸಾಧನೆಯಲ್ಲಿ ಅಗ್ರಗಣ್ಯವೆನಿಸುವ ದಕ್ಷ ಪ್ರಾಧ್ಯಾಪಕ ವರ್ಗವಿದೆ. ಪಠ್ಯಕ್ರಮದಲ್ಲಿ ಸುಮಾರು 10ರಿಂದ 20 ವರ್ಷ ಅನುಭವವುಳ್ಳ ಪ್ರಾಧ್ಯಾಪಕ ವೃಂದ ಮಕ್ಕಳ ಸಾಧನೆ ಮತ್ತು ಏಳಿಗೆಗಾಗಿ ಶ್ರಮಿಸುತ್ತಿದೆ.
ಸುಸಜ್ಜಿತ ವಸತಿ ನಿಲಯ: ಕಾಲೇಜಿನಲ್ಲಿ ಸುಸಜ್ಜಿತ ವಸತಿ ನಿಲಯಗಳಿವೆ. ನಿತ್ಯವೂ ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳಲು 30 ವಿದ್ಯಾರ್ಥಿಗಳಿಗೆ ಒಬ್ಬರಂತೆ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಮುಂಜಾನೆ ೫ಕ್ಕೆ ಏದ್ದು ಪ್ರಾತಃವಿಧಿ ಪೂರೈಸಿ ಯೋಗ-ಧ್ಯಾನ-ಪ್ರಾರ್ಥನೆ ಮುಗಿಸಿ 6ಕ್ಕೆ ಅಧ್ಯಯನಕ್ಕೆ ತೊಡಗುತ್ತಾರೆ. 6ರಿಂದ 8ರ ತನಕ ನೀಟ್/ಜೆಇಇ/ಸಿಇಟಿ ಕೋಚಿಂಗ್ ನಡೆಯುತ್ತದೆ. ತರಗತಿ ಮತ್ತು ಇಂಟಿಗ್ರೇಟೆಡ್ ಕೋಟಿಂಗ್ ಅವಧಿ ಮುಗಿದ ಬಳಿಕ ಸಂಜೆ 6ರಿಂದ 8, ಊಟದ ಬಳಿಕ ರಾತ್ರಿ ೧೧ರ ತನಕ ಅಧ್ಯಯನದ ಅವಧಿ. ಅಧ್ಯಯನ ವೇಳೆ ಎಲ್ಲ ವಿಷಯಗಳ ಉಪನ್ಯಾಸಕರು ಆಯಾ ವಿಷಯಗಳ ಸಂದೇಹ ನಿವಾರಣೆಗೆ ವಿದ್ಯಾರ್ಥಿಗಳಿಗೆ ಲಭ್ಯವಾಗುವುದು ವಿಶೇಷ.
ವಾಣಿಜ್ಯ ವಿಭಾಗಕ್ಕೂ ವಿಸ್ತರಣೆ: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಕ್ಸೆಲ್ ಕಾಲೇಜು ವಾಣಿಜ್ಯ ವಿಭಾಗಕ್ಕೂ ವಿಸ್ತರಿಸಿಕೊಂಡಿದೆ. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದುಕೊಂಡವರೂ ಎಕ್ಸೆಲ್‌ನಲ್ಲಿ ದ್ವಿತೀಯ ಪಿಯುಸಿ ಮುಗಿಸುವಾಗ ಡಿಸ್ಟಿಂಕ್ಷನ್ ಗಳಿಸುವುದು ಸಾಮಾನ್ಯ. 10ನೇ ತರಗತಿಯಲ್ಲಿ ಶೇ.49 ಪಡೆದು ಎಕ್ಸೆಲ್‌ನಲ್ಲಿ ವಿಜ್ಞಾನ ವಿಭಾಗಕ್ಕೆ ದಾಖಲಾದ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ.92 ಪಡೆದು ಉತ್ತೀರ್ಣರಾಗಿದ್ದಾರೆ.
ವೈಯುಕ್ತಿಕ ಕಾಳಜಿ ವಹಿಸಿ ಮೇಲ್ವಿಚಾರಣೆ: ಸುಮಂತ್ ಜೈನ್ – ಎಕ್ಸೆಲ್ ಕಾಲೇಜಿನ ಯಶಸ್ಸಿಗೆ ಸಂಸ್ಥೆ ಹೊಂದಿರುವ ಶಿಕ್ಷಣ ವ್ಯವಸ್ಥೆಯೇ ಪ್ರಮುಖ ಕಾರಣ. ಹಾಸ್ಟೆಲ್ ಜೀವನದಲ್ಲಿ ಕಷ್ಟ ಬಂದರೂ ಭವಿಷ್ಯದಲ್ಲಿ ನಿರ್ಭೀತಿಯಿಂದ ಬದುಕಲು ಬೇಕಾದ ಜೀವನ ಪಾಠ ಕಲಿಸಿಕೊಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಪ್ರಗತಿಯ ಕಡೆಗೆ ವೈಯಕ್ತಿಕ ಕಾಳಜಿ ವಹಿಸಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಕಕ್ಕಿಂಜೆ,ಉಪ್ಪಿನಂಗಡಿ, ವೇಣೂರು, ನಾರಾವಿ, ಕೈಕಂಬ – ಬಿ.ಸಿ ರೋಡ್, ಧರ್ಮಸ್ಥಳ ಮುಂತಾದ ಕಡೆಯಿಂದ ಸುಸಜ್ಜಿತ ಕಾಲೇಜು ಬಸ್ ವ್ಯವಸ್ಥೆ ಮಾಡಲಾಗಿದೆ.
-ಸುಮಂತ್ ಕುಮಾರ್ ಜೈನ್, ಅಧ್ಯಕ್ಷರು ಆಡಳಿತ ಮಂಡಳಿ, ಎಕ್ಸೆಲ್ ಕಾಲೇಜು
ದಾಖಲಾತಿ ಪ್ರಕ್ರಿಯೆ ಆರಂಭ:
2025-26ನೇ ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಮುಂಗಡ ದಾಖಲಾದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಸಿಗುತ್ತದೆ. ವೆಬ್ ಸೈಟ್ ಮೂಲಕ ದಾಖಲು ಮಾಡಿಕೊಳ್ಳಬಹುದು. ಅಥವಾ ದೂರವಾಣಿ 98808 99769/88672 42769 ಮೂಲಕವೂ ಸಂಸ್ಥೆಯನ್ನು ಸಂಪರ್ಕಿಸಬಹುದು.