ಕುತ್ಯಾರು: ಹೊಸಮನೆ ಶ್ರೀ ಸಪರಿವಾರ ನಾಗಬ್ರಹ್ಮಾದಿ ಕ್ಷೇತ್ರ – ಶ್ರೀ ಗಣಪತಿ ದುರ್ಗಾ ಮತ್ತು ಶ್ರೀ ನಾಗದೇವರ ಸಾನಿಧ್ಯ ಕಲಶಾಭಿಷೇಕ – ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

0

p>

ಬೆಳ್ತಂಗಡಿ: ಕುತ್ಯಾರು ಹೊಸಮನೆ ರೆಂಕೆದಗುತ್ತು ಶ್ರೀ ಸಪರಿವಾರ ನಾಗಬ್ರಹ್ಮಾದಿ ಕ್ಷೇತ್ರದಲ್ಲಿ ಡಿ. 28ರಿಂದ 29ರ ತನಕ 12ನೇ ವರ್ಷದ ಶ್ರೀ ಗಣಪತಿ ದುರ್ಗಾ ಮತ್ತು ಶ್ರೀ ನಾಗದೇವರ ಸಾನಿಧ್ಯ ಕಲಶಾಭಿಷೇಕದ ಹಿನ್ನೆಲೆಯಲ್ಲಿ ಸಂಜೆ 4ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಯಿತು.

ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದಿಂದ ಕ್ಷೇತ್ರದ ಸನ್ನಿಧಾನದವರೆಗೆ ವೈಭವಯುತ ಮೆರವಣಿಗೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ನಡೆಯಿತು. ಹೊರೆಕಾಣಿಕೆ ಸಮರ್ಪಣೆಯ ಉದ್ಘಾಟನೆಯನ್ನು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ನೆರವೇರಿಸಿದರು.

ಸಂಜೆ 5 ಗಂಟೆಯಿಂದ ಪುಣ್ಯಾಹ ಸಪ್ತಶುದ್ಧಿ, ಸುದರ್ಶನ ಹೋಮ, ದುರ್ಗಾ ಪೂಜೆ, ವಾಸ್ತು ಪೂಜೆ ವಾಸ್ತು ಬಲಿ, ಸಂಜೆ 6 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಜರಗಲಿದೆ. ಡಿ. 29ರಂದು ಬೆಳಿಗ್ಗೆ 7ರಿಂದ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಬೆಳಿಗ್ಗೆ 10ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ನಾಗಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕಿರಣ್ ಕುಲಾಲ್ ತಿಳಿಸಿದರು.

LEAVE A REPLY

Please enter your comment!
Please enter your name here