ಡಿ. 28-30: ಕಳಿಯ ಪರಪ್ಪು ಮೂಡಾಯಿಪಲ್ಕೆ ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದಲ್ಲಿ 7ನೇ ವರ್ಷದ ವಾರ್ಷಿಕ ಉತ್ಸವ – ಪತ್ರಿಕಾ ಗೋಷ್ಠಿ

0

p>

ಬೆಳ್ತಂಗಡಿ: ಕಳಿಯ ಗ್ರಾಮದ ಪರಪ್ಪು ಉದ್ಭವ ಶ್ರೀ ಆದಿಬ್ರಹ್ಮಲಿಂಗೇಶ್ವರ ಕ್ಷೇತ್ರ, ಮೂಡಾಯಿಪಲ್ಕೆಯಲ್ಲಿ ಡಿ. 28 ರಿಂದ 30 ರವರೆಗೆ 7ನೇ ವರ್ಷದ ವಾರ್ಷಿಕ ಉತ್ಸವ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ, ಗಣಹೋಮ, ಭಜನೆ ಕಾರ್ಯಕ್ರಮ, ಭಕ್ತಿ ರಸಮಂಜರಿ ಹಾಗೂ ದೈವಗಳಿಗೆ ಪರ್ವ, ದೈವೋತ್ಸವವು ಪೂರಕ ವಿಧಿ ವಿಧಾನಗಳೊಂದಿಗೆ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಉದ್ಭವ ಶ್ರೀ ಆದಿಲಿಂಗೇಶ್ವರ ದೇವಸ್ಥಾನ ಸೇವಾ ಟೇಸ್ಟ್ ಅಧ್ಯಕ್ಷ ರುಕ್ಮಯ್ಯ ಎಂ. ಹೇಳಿದರು.

ಅವರು ಡಿ. 24 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು. ಕಳೆದ ವರ್ಷ ನಮ್ಮ ಕ್ಷೇತ್ರದಲ್ಲಿ ಮತ್ತು ದೈವೋತ್ಸವ ನಡೆಯುತ್ತಿದ್ದ ಸಂದರ್ಭ ಬೇರೆ ಸಮುದಾಯದ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅಕ್ರಮವಾಗಿ ಪ್ರವೇಶಿಸಿ ತಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದು ದಾಂಧಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿ ಅಹಿತಕರ ಘಟನೆ ನಡೆದಿತ್ತು.

ಕೆಲ ವ್ಯಕ್ತಿಗಳಿಂದ ಉಂಟಾದ ಅಹಿತಕರ ಘಟನೆಯಿಂದ ಅಪಪ್ರಚಾರದಿಂದ ನಮ್ಮ ಕ್ಷೇತ್ರದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿತ್ತು. ಈ ಬಗ್ಗೆ ಮಾನಸಿಕವಾಗಿ ನೊಂದ ನಾವು ಕ್ಷೇತ್ರದಲ್ಲಿ ಈ ವ್ಯಕ್ತಿಗಳು ಅಥವಾ ಯಾವುದೇ ವ್ಯಕ್ತಿಗಳು ಅಶಾಂತಿ, ಅಹಿತಕರ ಘಟನೆ ನಡೆಸದಂತೆ, ಅಕ್ರಮವಾಗಿ ಕ್ಷೇತ್ರಕ್ಕೆ ಪ್ರವೇಶಿಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದು ಬೆಳ್ತಂಗಡಿ ನ್ಯಾಯಾಲಯದಿಂದ ಈ ಬಗ್ಗೆ ನಿರ್ಬಂಧಕಾಜ್ಞೆಯನ್ನು ತಂದಿದ್ದೇವೆ.

ಸಾರ್ವಜನಿಕರು, ಕ್ಷೇತ್ರದ ಭಕ್ತಾದಿಗಳು ಯಾವುದೇ ಅಪಪಚಾರ ತಪ್ಪು ಅಭಿಪ್ರಾಯಗಳಿಂದ ಗೊಂದಲಕ್ಕೊಳಗಾಗಬಾರದು. ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಎಂದಿನಂತೆ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ಕೋಶಾಧಿಕಾರಿ ರೇಖಾ, ಕಾನೂನು ಸಲಹೆಗಾರ ವಕೀಲ ಉದಯ ಬಿ. ಕೆ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here