p>
ಬೆಳ್ತಂಗಡಿ: ಚಿಕ್ಕಮಗಳೂರಿನ ಎನ್ ಆರ್ ಪುರ ತಾಲ್ಲೂಕಿನ ಗುಬ್ಬಿಗ ಗ್ರಾಮದ ಬಳಿ ಡಿ. 19 ರ ಸಂಜೆ ಕಾರು ಮತ್ತು ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರ ಓಡಿಲ್ನಾಳದ ಸಜೇಶ್ (24)ಸಾವನ್ನಪ್ಪಿದ್ದಾರೆ.
ಸಜೇಶ್ ಬೆಳ್ತಂಗಡಿಯಿಂದ ಚಿಕ್ಕಮಗಳೂರಿನ ತನ್ನ ಸಂಬಂಧಿಯ ಮನೆಗೆ ತೆರಳುವ ವೇಳೆ ಘಟನೆ ನಡೆದಿದ್ದು, ತೀವ್ರ ಗಾಯಗೊಂಡ ಸಜೇಶ್ ರನ್ನು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸಜೇಶ್ ರ ಪಾರ್ಥೀವ ಶರೀರವನ್ನು ತಡರಾತ್ರಿ ಓಡಿಲ್ನಾಳಕ್ಕೆ ತರಲಾಗಿದ್ದು, ಡಿ. 20 ರಂದು ಅಂತ್ಯ ಸಂಸ್ಕಾರ ನಡೆಯಲಿದೆ.
p>