ಶಿಬಾಜೆ: ಬಲೆಯಲ್ಲಿ ಸಿಲುಕಿದ ಹೆಬ್ಬಾವಿನ ಮರಿ – ಶೌರ್ಯ ಸ್ವಯಂ ಸೇವಕರಿಂದ ರಕ್ಷಣೆ

0

p>

ಶಿಬಾಜೆ: ಕಳಪ್ಪಾರು ಸೆಬಾಸ್ಟಿಯನ್ ಎಂಬವರ ನೀರಿನ ಟಾಂಕಿಗೆ ಅಳವಡಿಸಿದ ರಕ್ಷಣಾ ಬಲೆಯಲ್ಲಿ ಹೆಬ್ಬಾವಿನ ಮರಿಯೊಂದು ಸಿಲುಕಿಕೊಂಡಿತ್ತು.

ಮನೆಯವರಿಂದ ಮಾಹಿತಿ ತಿಳಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಅರಸಿನಮಕ್ಕಿ ಶಿಶಿಲ ಶೌರ್ಯ ಘಟಕದ ಹಿರಿಯ ಉರಗಪ್ರೇಮಿ ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಪಡೆದ ಉರಗ ಸಂರಕ್ಷಕರಾದ ಸುರೇಶ್ ಶಿಬಾಜೆ ಇವರ ಸಹಕಾರವನ್ನು ಕೇಳಿದರು. ಸುರೇಶ್ ಶಿಬಾಜೆ ಇವರ ಸಲಹೆಯಂತೆ ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪ ವಲಯ ಸಂರಕ್ಷಣಾಧಿಕಾರಿಗಳಾದ ರಾಜೇಶ್ ಅರಣ್ಯ, ಇಲಾಖೆ ಸಿಬ್ಬಂದಿಗಳಾದ ಸತೀಶ್ ಹಾಗೂ ಚಂದ್ರ ಇವರ ಉಪಸ್ಥಿತಿಯಲ್ಲಿ ಹೆಬ್ಬಾವಿನ ಮರಿಯನ್ನು ಸುರಕ್ಷಿತವಾಗಿ ಬಲೆಯಿಂದ ಬಿಡಿಸಿ ಕಾಡಿಗೆ ಬಿಡಲಾಯಿತು.

p>

LEAVE A REPLY

Please enter your comment!
Please enter your name here