ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿ. ಕೆ. ಆರ್. ಡಿ. ಎಸ್ (ರಿ) ಇದರ ನೇತೃತ್ವದಲ್ಲಿ ಸಿ. ಒ. ಡಿ. ಪಿ ಮಂಗಳೂರು, ಕಿಡ್ಸ್ ಪುತ್ತೂರು ಹಾಗೂ ಸಂಪದ ಉಡುಪಿ ಇವುಗಳ ಸಹಕಾರದಿಂದ ಕ್ಲಸ್ಟರ್ ಮಟ್ಟದ ಸ್ಥಳೀಯ ಸಂಪನ್ಮೂಲ ಕ್ರೋಡೀಕರಣ ಕುರಿತು ತರಬೇತಿ ಕಾರ್ಯಕ್ರಮವು ಬೆಳ್ತಂಗಡಿ ಜ್ಞಾನನಿಲಯದಲ್ಲಿ ಡಿ. 17 ಹಾಗೂ 18 ರಂದು ನಡೆಯಿತು.
ಜ್ಞಾನ ನಿಲಯದ ನಿರ್ದೇಶಕ ವಂದನೀಯ ಫಾ. ಜೋಸೆಫ್ ಮಟ್ಟಮ್ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದರು. ಬೆಂಗಳೂರು ಕ್ರಾಸ್ ಸಂಸ್ಥೆಯ ರಾಜ್ಯ ಸಂಯೋಜಕಿ ಲೈನಾ ಲಸ್ರಾದೋ ಕಾರ್ಯಕ್ರಮದಕ್ಕೆ ಶುಭ ಕೋರಿದರು.
ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾ. ಬಿನೋಯಿ ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. 4 ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಜಿರೆ ರುಡ್ ಸೆಟ್ ನ ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಹಾಂ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಜಯಕುಮಾರ್ ಶೆಟ್ಟಿ ಹಾಗೂ ಟಿ. ಕೃಷ್ಣ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಸ್ಥಳೀಯ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ತರಬೇತಿ ನೀಡಿದರು.
ಒಟ್ಟು 42 ಮಂದಿ ಭಾಗವಹಿಸಿದರು. ಉಡುಪಿ ಸಂಪದ ಸಂಸ್ಥೆಯ ಸಿಬ್ಬಂದಿಗಳು ಪ್ರಾರ್ಥನಾ ಗೀತೆ ಹಾಡಿದರು. ಡಿ. ಕೆ. ಆರ್. ಡಿ. ಎಸ್ ಕಾರ್ಯಕರ್ತೆ ಸುಶೀಲ ಕೆ. ಜಿ. ಎಲ್ಲರನ್ನು ಸ್ವಾಗತಿಸಿದರು. ಮಾರ್ಕ್ ಡಿಸೋಜರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರಾದ ಜೋನ್ಸನ್ ವಂದಿಸಿದರು.