ಕುಕ್ಕೇಡಿ: ಕರ್ನಾಟಕ ರಾಜ್ಯ ಪರವನ್ ಸಂಘ ಬೆಳ್ತಂಗಡಿ ತಾಲೂಕು ವತಿಯಿಂದ ಡಿ. 1 ರಂದು ಕುಕ್ಕೇಡಿ ಗೋಳಿಯಂಗಡಿ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಪರವನ್ ಸಂಘ ಮೂಡಬಿದ್ರೆ ಸದಸ್ಯ ಸುಕುಮಾರ್ ನಿಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉದಯ ಹಚ್ಚೆವುಪಲ್ಕೆ ಅಧ್ಯಕ್ಷತೆ ವಹಿಸಿದ್ದರು. ವಗ್ಗ ಎಸ್. ಸಿ. ಡಿ. ಸಿ. ಸಿ ಬ್ಯಾಂಕಿನ ಓಬಯ್ಯ ಕಜೆಕಾರ್, ಧರ್ಮಸ್ಥಳ ಗ್ರಾಮ ಪಂಚಾಯತ್ ಬಾಬು ಧರ್ಮಸ್ಥಳ, ಕಾರ್ಯದರ್ಶಿ ಹರೀಶ್ ಹೆಚ್. ರನ್ನಾಡಿ ಪಲ್ಕೆ, ಕೋಶಾಧಿಕಾರಿ ಶೇಖರ್ ಆರ್., ಉಪಾಧ್ಯಕ್ಷ ಹೆಚ್. ಪದ್ಮ, ಸುರೇಶ್ ಹಚ್ಚೆವು ಪಲ್ಕೆ, ಕೃಷ್ಣಪ್ಪ ರನ್ನಾಡಿ ಪಲ್ಕೆ, ಗಿರೀಶ್ ಹಚ್ಚೆವು ಪಲ್ಕೆ, ಆನಂದ ಪಣೆಜಾಲು ಉಪಸ್ಥಿತರಿದ್ದರು.
ಕಬಡ್ಡಿ, ಕ್ರೀಕೇಟ್, ತ್ರೋಬಾಲ್, ಹಗ್ಗ ಜಗ್ಗಾಟ ಮೊದಲಾದ ಕ್ರೀಡಾಕೂಟ ನಡೆಯಿತು. ನಿರ್ಮಿತಾ ಕಕ್ಕಿಂಜೆ ಸ್ವಾಗತಿಸಿ, ರವೀಶ್ ಪೆದಮಲೆ ನಿರೂಪಿಸಿದರು, ಪುಷ್ಪ ಕುಮಾರಿ ವಂದಿಸಿದರು.