

ಉಜಿರೆ: ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್ ಲಾಯಿಲ ಇದರ ಬೆಳ್ಳಿ ಹಬ್ಬ ಕಾರ್ಯಕ್ರಮ ನ. 22 ರಂದು ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್ ಅಧ್ಯಕ್ಷೆ ಶಾಲಿ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಧ್ಯಕ್ಷರು ವಂ. ಫಾ. ಅಲ್ವಿನ್ ಡಾಯಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಮೂಡಬಿದ್ರೆ ವಕೀಲೆ ಅಶ್ವಿನಿ ಡಿಸೋಜ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಮುಕ್ತಿ ಸಿಕೆಎಸ್ ಕೆ ನಿರ್ದೇಶಕರು ವಂ. ಫಾ. ವಿನೋದ್ ಮಸ್ಕರೇನ್ಹಸ್ ಪ್ರಸ್ತಾಪಿಸಿದರು. ವಲೇರಿಯನ್ ಸ್ವಾಗತಿಸಿ, ವಿಮುಕ್ತಿ ಸ್ವ ಸಹಾಯ ಸಂಘಗಳ ಕಾರ್ಯದರ್ಶಿ ರೈನಾ ಲೋಬೊ ವರದಿ ವಾಚಿಸಿದರು. ವಿಮುಕ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಉಪಾಧ್ಯಕ್ಷೆ ಶಶಿಕಲಾ, ಜೊತೆ ಕಾರ್ಯದರ್ಶಿ ಪ್ರಮೀಳಾ, ಖಜಾಂಜಿ ಅನ್ನಮ್ಮ ವರ್ಗಿಸ್, ಸದಸ್ಯರು ಹಾಜರಿದ್ದರು.