ಪದ್ಮುಂಜ: ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯ ವತಿಯಿಂದ ಚಿಣ್ಣರ ವಣ್ಯ ದರ್ಶನ ಕಾರ್ಯಕ್ರಮದ ಪ್ರಯುಕ್ತ ನ. 21 -22 ರಂದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪ್ರವಾಸ. ನ. 21ರಂದು ಸರಕಾರಿ ಪ್ರೌಡ ಶಾಲೆಯಿಂದ ಹೊರಡಲಾಯ್ತು ಶಾಲೆಯಿಂದ ಹೊರಟು ಕುಪ್ಪೆಟ್ಟಿ ಗುರುವಾಯನಕೆರೆ, ಕಾರ್ಕಳ, ಬಜಗೋಳಿ ಮಾರ್ಗವಾಗಿ ಕುದುರೆಮುಖ ನಿಸರ್ಗದಾಮಕ್ಕೆ ಹೋಗಿ ಅರಣ್ಯ ಇಲಾಖೆಯವರು ಸೂಚಿಸಿದ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲಾಗುತ್ತದೆಂದು ತಿಳಿದುಬಂದಿದೆ. ವಿಧ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕಿ ಸುಮತಿ ಪಿ.ಎನ್., ಅಧ್ಯಾಪಕರಾದ ಗಾಯತ್ರಿ, ವಿನಯ್, ಅನಂತ ಕ್ರಷ್ಣ ಹೋಗಿರುತ್ತಾರೆ.
ಬೇಸರ ವ್ಯಕ್ತಪಡಿಸಿದ ಉಳಿದ ವಿಧ್ಯಾರ್ಥಿಗಳು ಅರಣ್ಯ ಇಲಾಖೆಯವರ ಉಚಿತ ಚಿಣ್ಣರ ವಣ್ಯ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಎಲ್ಲಾ ವಿಧ್ಯಾರ್ಥಿಗಳ ಪೋಷಕರಿಂದ ಅನುಮತಿ ಪತ್ರಕ್ಕೆ ಸಹಿ ಪಡೆದುಕೊಂಡಿದ್ದರು. ವಿಧ್ಯಾರ್ಥಿಗಳು ಸಹ ತುಂಬಾ ಸಂತೋಷದಿಂದ ಕುಣಿಯುತ್ತಿದ್ದರು.
ಆದರೆ ಇದೀಗ ಅರಣ್ಯ ಇಲಾಖೆಯವರು ಕೆಲವು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ ಉಳಿದ ವಿದ್ಯಾರ್ಥಿಗಳನ್ನು ಬಿಟ್ಟು ಹೋಗಿರುವುದು ವಿದ್ಯಾರ್ಥಿಗಳಿಗೂ ಪೋಷಕರಿಗೂ ವ್ಯಾಪಕ ಬೇಸರವುಂಟುಮಾಡಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎಂದು ಕಾದುನೋಡಬೇಕಾಗಿದೆ.