ವೇಣೂರು : ಇಲ್ಲಿಯ ಶ್ರೀ ರಾಮ ನಗರ ಕೆಳಗಿನ ಪೇಟೆಯಲ್ಲಿ ಶ್ರೀ ಸಾಯಿ ಗಿಫ್ಟ್ ಮತ್ತು ಟಾಯ್ಸ್ ಸೆಂಟರ್ ಅ.23ರಂದು ಶುಭಾರಂಭಗೊಂಡಿತು. ವಿಧಾನ ಪರಿಷತ್ ಸದಸ್ಯ ಪುತ್ತೂರು ಕಿಶೋರ್ ಕುಮಾರ್ ಬೊಟ್ಯಾಡಿ ಉದ್ಘಾಟನೆ ನೆರವೇರಿಸಿ, ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಮಳಿಗೆಯ ಅವಶ್ಯಕತೆ ಇದೆ ಸಂಸ್ಥೆಯ ಜೊತೆಗೆ ಊರಿನ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಪ್ರಗತಿಗೆ ಹಠ ಸಾಧನೆಯಿಂದ ಮುನ್ನಡೆಯಲು ಸಾಧ್ಯ ಎಂದರು. ವೇಣೂರು ನಮನ ಕ್ಲಿನಿಕ್ ಡಾ. ಶಾಂತಿಪ್ರಸಾದ್, ವೇಣೂರು ಉದ್ಯಮಿ ಭಾಸ್ಕರ ಪೈ, ವೇಣೂರು ಗಣೇಶ್ ಟ್ರೇಡರ್ಸ್ ಗಣಪತಿ ಭಟ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯ ಸುಂದರ ಹೆಗ್ಡೆ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕಾಶಿ ನಾಥ್, ಉಪಾಧ್ಯಕ್ಷ ಉಮೇಶ್ ಎನ್., ಕುಂಭಶ್ರೀ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ. ಹೆಚ್. ಗಿರೀಶ್ ಭಾಗಾವಹಿಸಿ ಶುಭ ಕೋರಿದರು.
ಸ್ಥಳೀಯರಾದ ಭೋಜ ಪೂಜಾರಿ, ರಾಧಾಕೃಷ್ಣ, ರಾಜೇಶ್ ಕುಲಾಲ್, ಮುರಳೀಧರ, ಲೋಕೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಮಾಲಕ ಪ್ರವೀಣ್ ಭಂಡಾರಿ, ರಮ್ಯ ಪ್ರವೀಣ್ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ಗಣೇಶ್ ದೇವಾಡಿಗ, ನಾರಾಯಣ ಕುಲಾಲ್, ಸುಶ್ಮಿತಾ ಸಹಕರಿಸಿದರು. ಈ ಸಂದರ್ಭದಲ್ಲಿ ಅನೀಶ್ ವೇಣೂರು, ಸತೀಶ್ ಭಂಡಾರಿ ಗೇರುಕಟ್ಟೆ ಇವರನ್ನು ಗೌರವಿಸಲಾಯಿತು.