ಬೆಳ್ತಂಗಡಿ: ವೆನಿಲ್ಲಾ ಕೃಷಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದು ಸುದೀರ್ಘ ವರ್ಷ ಕೃಷಿಯಲ್ಲೇ ಖುಷಿ ಕಂಡುಕೊಂಡಿದ್ದ ಪಣಕಜೆ ಮಜಲು ಮನೆ ನಿವಾಸಿ ಅಬ್ದುಲ್ಲ (69ವ) ರವರು ಅಲ್ಪಕಾಲದ ಅಸೌಖ್ಯದಿಂದ
ಮದ್ದಡ್ಕದ ಅವರ ಮಗನ ನಿವಾಸದಲ್ಲಿ ಅ.25ರಂದು ನಿಧನರಾಗಿದ್ದಾರೆ.
ಉಡುಪಿಯಲ್ಲಿ ಅವರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ಇತ್ತ ಮನೆಯಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ನೆಬಿಸ, ಪುತ್ರರಾದ ರಫೀಕ್, ಹನೀಫ್, ಅಬ್ದುಲ್ ಲೆತೀಫ್, ಹಂಝ ಹಾಗೂ ಪುತ್ರಿ ಮೈಮುನಾ ಅವರನ್ನು ಅಗಲಿದ್ದಾರೆ.
p>