ಉಜಿರೆ: ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬೋಧಕ ಸಿಬ್ಬಂದಿಗಳಿಗೆ “ಬೋಧನಾ ಶಿಕ್ಷಕರ ಸಬಲೀಕರಣ” ಕಾರ್ಯಗಾರ

0

ಉಜಿರೆ: ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬೋಧಕ ಸಿಬ್ಬಂದಿಗಳಿಗೆ “ಬೋಧನಾ ಶಿಕ್ಷಕರ ಸಬಲೀಕರಣ” ಕಾರ್ಯಗಾರವನ್ನು ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಅ.26ರಂದು ಆಯೋಜಿಸಲಾಗಿತ್ತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಕಾರ್ಯಕ್ರಮ ಉದ್ಘಾಟಿಸಿ, “ಶಿಕ್ಷಣವು ನಿಂತ ನೀರಾಗಬಾರದು, ಹರಿಯುವ ನೀರಿನಂತಿರಬೇಕು. ಕಾರ್ಯಗಾರದ ಫಲಿತಾಂಶದಿಂದ ಮೌಲ್ಯಾಧಾರಿತ ಬೋಧನೆ ನಡೆಯಲಿ” ಎಂದು ಶಿಕ್ಷಕ ವೃಂದಕ್ಕೆ ಶುಭಹಾರೈಸಿ, ಉದ್ಘಾಟನಾ ಭಾಷಣ ಮಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಸರ್ಕಾರದ, ದ.ಕ ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯೆ ಬೊಳ್ವಾರ್ ಕಸ್ತೂರಿ ‘ಮಕ್ಕಳ ಹಕ್ಕುಗಳು, ಶಿಕ್ಷಕರ ಜವಾಬ್ದಾರಿ ಮತ್ತು ಕಾನೂನಿನ ಅಂಶಗಳು’, ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕಾಲೇಜಿನ ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ರಮ್ಯಾ ಕೆ.ಟಿ ‘ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ನನ್ನ ಪಾತ್ರ’ ಹಾಗೂ ಕಾಶಿಪಟ್ಣ ಸರ್ಕಾರಿ ಪ್ರೌಢಶಾಲೆಯ ಸಹಾಯಕ ಶಿಕ್ಷಕ ದೇವದಾಸ್ ನಾಯಕ್, ಶಿರ್ಲಾಲು ಸ.ಉ.ಹಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಜೇಶ್ವರಿ ಬಿ. ನಾಯಕ್ ‘ಅನುಭವದೊಂದಿಗೆ ಕಲಿಕೆ’ ಎಂಬ ವಿಷಯದ ಕುರಿತು ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್, ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಹಾಗೂ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲ ಮನಮೋಹನ್ ನಾಯಕ್ ಕೆ.ಜಿ. ಉಪಸ್ಥಿತರಿದ್ದರು.

ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಪ್ರಾಂಶುಪಾಲ ಮನಮೋಹನ್ ನಾಯಕ್ ಕೆ. ಜಿ. ಸ್ವಾಗತಿಸಿ, ಶಿಕ್ಷಕರಾದ ಕಿರಣ್ ರಾಜ್, ಜಾರ್ಜ್ ಕೆ. ಹಾಗೂ ಶಿಕ್ಷಕಿ ಸುಜನ ವಾಲ್ತಾಜೆ
ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here