ಬೆಳ್ತಂಗಡಿ: ಸಿಪಿಐ(ಎಂ ) ಬೆಳ್ತಂಗಡಿ ತಾಲೂಕು 10ನೇ ಸಮ್ಮೇಳನ

0

ಬೆಳ್ತಂಗಡಿ : ದೇಶವನ್ನು ಆಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ಅತಿಭೃಷ್ಟ ಸರಕಾರವಾಗಿದ್ದು, ಇಂತಹ ಭೃಷ್ಟ ಮತ್ತು ಕಾರ್ಮಿಕ ವಿರೋದಿ ಸರಕಾರವನ್ನು ಹಿಮ್ಮೆಟ್ಟಿಸುವುದು ಭಾರತೀಯರ ಇಂದಿನ ಕರ್ತವ್ಯವಾಗಿದ್ದು ಆ ಮೂಲಕ ರೈತರ, ಕಾರ್ಮಿಕರ ಬದುಕಿನ ರಕ್ಷಣೆ ಮಾಡಬೇಕಾದ್ದು ಅತೀ ಅಗತ್ಯ ಕೆಲಸವಾಗಿದೆ. ಅದು ಸಿಪಿಐ(ಎಂ) ಬೆಳವಣಿಗೆಯಿಂದಷ್ಟೇ ಸಾದ್ಯ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪ ಕೊಂಚಾಡಿ ಹೇಳಿದರು.

ಅವರು ಅ.13ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐ(ಎಂ) ಬೆಳ್ತಂಗಡಿ ತಾಲೂಕು 10ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಅಟೋದಲ್ಲಿ ಜನ ತಂದು ಹೋರಾಟ ನಡೆಸುತ್ತಿದ್ದ ಶ್ರೀಲಂಕದಲ್ಲೇ ಜನ ಇಂದು ಕಮ್ಯೂನಿಸ್ಟನ್ನು ಗೆಲ್ಲಿಸಿ ಬದಲಾವಣೆ ತಂದಿದ್ದಾರೆ. ಅದೇ ರೀತಿ ಭಾರತದಲ್ಲೂ ಜನ ಬದಲಾವಣೆ ಬಯಸುತ್ತಾರೆ ಮತ್ತು ಬದಲಾವಣೆ ಮಾಡುತ್ತಾರೆ. ದುಡಿಯುವ ವರ್ಗದ ವಿರೋದಿ ಸರಕಾರವನ್ನು, ಮತೀಯ ಸರಕಾರವನ್ನು, ಶೋಷಕ ವರ್ಗದ ಹಿತ ಕಾಪಾಡುವ ಸರಕಾರವನ್ನು ಹಿಮ್ಮೆಟ್ಟಿಸುವುದು ಇಂದಿನ ಅಗತ್ಯವಾಗಿದೆ ಎಂದರು. ಸರಕಾರ ಜನ ವಿರೋದಿ ನಡೆಯನ್ನು ಹಿಮ್ಮೆಟ್ಟಿಸಲು ಜನ ಪರವಾಗಿ ಧ್ವನಿ ಎತ್ತುತ್ತಾ ಬಂದ ಸಿಪಿಎಂ ಪಕ್ಷವಾದ ನಾವು ಬಿಜೆಪಿ ಪಕ್ಷದ ಚುನಾವಣಾ ಬಾಂಡು ಹಗರಣವನ್ನೂ ಬಯಲಿಗೆಳೆದಿವೆ ಎಂದರು.

ಸಮಾರೋಪ ಭಾಷಣ ಮಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಜಿಲ್ಲೆಯ ಕೋಮುವಾದಿ ಶಕ್ತಿಗಳ ವಿರುದ್ದ ನಿರಂತರ ಸಮರ ಸಾರುವವರು ನಾವು ಕಮ್ಯೂನಿಸ್ಟರು ಮಾತ್ರ ಎಂದರು. ನಮ್ಮ ಪಕ್ಷದ ಬಲವರ್ದನೆಯೇ ಜಿಲ್ಲೆಯ ಜನರ ಬದುಕಿನ ಅಭಿವೃದ್ದಿಯ ಬದಲಾವಣೆಗೆ ಇರುವ ಏಕೈಕ ಬೆಳಕಿನ ದಾರಿಯಾಗಿದೆ. ನಾವು ಜಿಲ್ಲೆಯಲ್ಲಿ ಒಂದು ನಿರ್ಣಾಯಕ ಶಕ್ತಿಯಾಗಿದ್ದು ಹಲವು ಕಾರ್ಯಕ್ರಮಗಳನ್ನು ನಡೆಸಿ ಕೆಲವು ಕೋಮುವಾದಿ ಶಕ್ತಿಗಳ ಹಾಗೂ ಖಾಸಗೀ ಬಂಡವಾಳಿಗರ ಸರ್ವಾಧಿಕಾರಿ ನಡೆಯನ್ನು ಹಿಮ್ಮೆಟ್ಟಿಸಲು ಮತ್ತು ಜನರ ಮೆಚ್ಚುಗೆ ಗಳಿಸಲು ನಮಗೆ ಸಾದ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ಶ್ಯಾಮರಾಜ್ ವಹಿಸಿದ್ದರು. ಸಮ್ಮೇಳನದ ಧ್ವಜಾರೋಹಣ ನೆರವೇರಸಿದ ಕಾಂ. ಲಕ್ಷ್ಮಣ ಗೌಡ, ತಾಲೂಕು ಮುಖಂಡರುಗಳಾದ ಬಿ.ಎಂ.ಭಟ್, ಜಯರಾಮ ಮಯ್ಯ, ಈಶ್ವರಿ, ನೆಬಿಸಾ, ಧನಂಜಯ ಗೌಡ, ಲೋಕೇಶ್ ಕುದ್ಯಾಡಿ ಮೊದಲಾದವರು ವೇದಿಕೆಯಲ್ಲಿದ್ದರು.

ಇಎಂಎಸ್ ಭವನದಿಂದ ಅಂಬೇಡ್ಕರ್ ಭವನದ ತನಕ ಪಕ್ಷದ ಪ್ರತಿನಿದಿಗಳು, ಪಕ್ಷದ ಸದಸ್ಯರು, ಹಿತೈಷಿಗಳು ಮೆರವಣಿಗೆ ನಡೆಸಿದರು. ಪ್ರಮುಖ ನಿರ್ಣಯಗಳನ್ನು ಸಮ್ಮೇಳನ ಅಂಗೀಕರಿಸಿತು. ನೂತನ ತಾಲೂಕು ಸಮಿತಿ ರಚಿಸಲಾಯಿತು.ನೂತನ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ವಂದಿಸಿದರು.

LEAVE A REPLY

Please enter your comment!
Please enter your name here