ಕೊಯ್ಯೂರು: ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಕೊಯ್ಯೂರು ಶ್ರೀ ಪಂಚದುರ್ಗಾ ಭಜನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಅ.3ರಿಂದ ಅ.11ರವರೆಗೆ ನಡೆದ ನವರಾತ್ರಿ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅ.10ರಂದು ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘ ಕೊಯ್ಯೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಗದಾಯುದ್ಧ ತಾಳಮದ್ದಳೆ ನಡೆಯಿತು.
ಭಾಗವತರಾಗಿ ದೇವಿ ಪ್ರಸಾದ್ ಗುರುವಾಯನಕೆರೆ, ಉಮೇಶ್ ಆಚಾರ್ಯ ಕೋಡಿಯೇಲು ಭಾಗವಹಿಸಿದರು. ಚೆಂಡೆ ಮದ್ದಳೆ: ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಕೆ.ಬಿ.ರಮೇಶ್ ಗೌಡ ಕೊಯ್ಯೂರು ನೆರವೇರಿಸಿದರು.
ಪಾತ್ರ ದಾರಿಗಳಾಗಿ ಲಕ್ಷ್ಮಣ ಗೌಡ ಬೆಳಾಲ್, ರಾಮಕೃಷ್ಣ ಭಟ್ ಚೊಕ್ಕಾಡಿ, ರಾಮಕೃಷ್ಣ ಭಟ್ ನಿನ್ನಿಕಲ್ಲು, ನಾರಾಯಣ ಭಟ್ ಬಾಸಮೆ, ಮಹಾಬಲ ಗೌಡ ಗುರುವಾಯನಕೆರೆ, ದಿವ ಕೊಕ್ಕಡ, ವಿಜಯ ಕುಮಾರ್ ಎಂ.ಕೊಯ್ಯೂರು, ಚಂದನ್ ಗುರ್ಬೊಟ್ಟು ಮುಂತಾದವರು ಭಾಗವಹಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ. ಹರಿಶ್ಚಂದ್ರ ಬಲ್ಲಾಳ್, ಪ್ರಧಾನ ಅರ್ಚಕ ಅಶೋಕ್ ಕುಮಾರ್ ಬಾಂಗಿಣ್ಣಾಯ ಉಪಸ್ಥಿತರಿದ್ದರು.
ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಗೌಡ ಜಾಲ್ನಪು, ಕಾರ್ಯದರ್ಶಿ ನಾರಾಯಣ ಪೂಜಾರಿ ಸಹಕರಿಸಿದರು. ಅನ್ವಿತ್ ವಿ.ಕೆ .ಸ್ವಾಗತಿಸಿ, ಅಭಿನವ್ ವಿ.ಕೆ. ವಂದಿಸಿದರು.