


ಉಜಿರೆ: ಕಿರಿಯಾಡಿಯಲ್ಲಿ ಶ್ರೀ ಸದಾಶಿವೇಶ್ವರ ಬಾಲಗೋಕುಲ ಕೇಂದ್ರ ಅ.6ರಂದು ನಡೆಯಿತು.ಕಿರಿಯಾಡಿ ದೇವಸ್ಥಾನದ ಆಡಳಿತ ಮೋಕ್ತೆಸರ ವಾಸುದೇವ ಸಂಪಿಗೆತ್ತಾಯ ಉದ್ಘಾಟಿಸಿದರು.
ಅರ್ಚಕ ಕೃಷ್ಣಮೂರ್ತಿ ಹೊಳ್ಳ, ಕಿರಿಯಾಡಿ, ನಿವೃತ್ತ ಸೇನಾ ಸೈನಿಕ ಜಯರಾಮ್ ಶೆಟ್ಟಿ ಕೆಂಬರ್ಜೆ, ನಿವೃತ್ತಿ ಶಿಕ್ಷಕ ಮೋಹನ್ ಶೆಟ್ಟಿ, ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಿಠಲ್ ಉಪಸ್ಥಿತರಿದ್ದರು.
ಬಾಲಗೋಕುಲ ಕೇಂದ್ರದ ಮಹತ್ವ, ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ, ತಾಲೂಕು ಸೇವಾ ಪ್ರಮುಖ್ ವಿಜಯ್ ಅರಳಿ ಉಜಿರೆ ಇವರು ಮಾಹಿತಿಯನ್ನು ಕೃಷ್ಣಮೂರ್ತಿ ಹೊಳ್ಳ ಮಕ್ಕಳಿಗೆ ಜೀವನದ ಮೌಲ್ಯಗಳು, ಇತ್ತೀಚೆಗೆ ತೀರ ಅಗತ್ಯವಾಗಿದ್ದು ಬಾಲ ಗೋಕುಲ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುವಂತೆ ಪೋಷಕರು ಮನವೊಲಿಸಬೇಕೆಂದರು.

ನಿವೃತ್ತ ಸೈನಿಕ ಜಯರಾಮ್ ಶೆಟ್ಟಿ ಕೆಂಬರ್ಜೆ ಮಾತನಾಡುತ್ತಾ ರಾಷ್ಟ್ರಭಕ್ತ, ಭಾರತೀಯ ಸಂಸ್ಕೃತಿ, ಭಾರತೀಯರ ಜೀವನ ಶೈಲಿ, ಪ್ರಾಮಾಣಿಕತೆ,, ಸಜ್ಜನಿಕೆ, ಶಿಸ್ತು, ದೇಶಭಕ್ತಿ, ಸದ್ಗುಣಗಳನ್ನು ರೂಪಿಸಿಕೊಳ್ಳಲು ಹಾಗೂ ಸ್ವಸ್ಥ ಸಮಾಜ ನಿರ್ಮಾಣವಾಗಲೂ ಬಾಲ ಗೋಕುಲ ಕೇಂದ್ರವು ದಾರಿ ದೀಪವಾಗಿದ್ದು, ಕೇಂದ್ರದ ಸದುಪಯೋಗವನ್ನು ಊರ ಹಿರಿಯರ, ಸಂಘ-ಸಂಸ್ಥೆಗಳ ಸಹಕಾರ ಪಡೆದು ಯಶಸ್ವಿಗೊಳಿಸೋಣ ಎಂದರು.
ಶ್ರೀ ಉಮಾಮೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ನಿವೃತ್ತ ಸೈನಿಕ ಸೂರಪ್ಪ ಗೌಡ ಕಿರಿಯಾಡಿ ಉಪಸ್ಥಿತರಿದ್ದರು.