



ಉಜಿರೆ: ಬದನಾಜೆ ಉನ್ನತೀಕರಿಸಿದ ಸರಕಾರಿ ಪ್ರಾಥಮಕ ಶಾಲೆಯಲ್ಲಿ ಅ.1ರಂದು ಪೋಷಕ-ಶಿಕ್ಷಕರ ಸಭೆ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅನಿಲ್ ಡಿ ಸೋಜ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಲಕ್ಷ್ಮಣ ಪೂಜಾರಿ ಭಾಗವಹಿಸಿ ಪೋಷಕರು ತಮ್ಮ ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಲು ಹಾಗೂ ಶಾಲೆಯ ಅಭಿವೃದ್ಧಿ ಚರ್ಚಿಸಲಾಯಿತು.
ಶಿಕ್ಷಕಿ ಜಯಲಕ್ಷ್ಮಿಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಶಿಕ್ಷಕಿ ಲಲಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಭಾರತಿ ವಂದಿಸಿದರು.









