ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಲೈತ್ ಬೆಂಗಳೂರು ಹಾಗೂ ISTE ಸಹಭಾಗಿತ್ವದೊಂದಿಗೆ ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃಧ್ಧಿ ಎಂಬ ವಿಷಯದ ಕುರಿತು ಸೆಪ್ಟೆಂಬರ್ 27 ಮತ್ತು 28ರಂದು ಇನೊವೇಟ್-ಥಾನ್ (Innovate-A-thon) ಎನ್ನುವ ಎರಡು ದಿನದ ಹ್ಯಾಕಥಾನ್ ಅಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಟಮಯ್ಯ, ಹಿರಿಯ ತಾಂತ್ರಿಕ ಆರ್ಕಿಟೆಕ್ಟ್ ಇನ್ಫೋಸಿಸ್ ಬೆಂಗಳೂರು, ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ದೈನಂದಿನ ಸಮಸ್ಯೆಗಳಿಗೆ ತಾಂತ್ರಿಕ ಹಿನ್ನಲೆಯಲ್ಲಿ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳುವಂತೆ ಹಾಗೂ ನೂತನ ಉತ್ಪನ್ನಗಳ ಅಭಿವೃಧ್ಧಿಯೆಡೆಗೆ ಆಲೋಚಿಸಲು ಅತ್ಯವಿರುವ ಕೌಶಲ್ಯಗಳ ಬಗ್ಗೆ ಮಾತನಾಡಿದರು.
ಡಿಲೈತ್ ಬೆಂಗಳೂರಿನ ಸಹ ಸಂಸ್ಥಾಪಕ ಅರುಣ್‌ರಾಜ್ ಪುರೋಹಿತ್ ಹ್ಯಾಕಥಾನ್ ನ ಪ್ರಾಮುಖ್ಯತೆ ತಿಳಿಸಿದರು. ಸೆಪ್ಟೆಂಬರ್ 28ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಹ್ಯಾಕಥಾನ್ ಸ್ಫರ್ಧೆಯಲ್ಲಿ ವಿಜೇತರಿಗೆ ಕಾಟಮಯ್ಯರವರು ನಗದು ಬಹುಮಾನ ವಿತರಿಸಿದರು.
ದೀಪಕ್, ಡೆವಲೊಪ್ಮೆಂಟ್ ಇಂಜಿನಿಯರ್, Backend ಮಂಗಳೂರು ಮತ್ತು ಕು.ಅರ್ಪಿತ, ಹಿರಿಯ ನೇಮಕಾತಿ ಅಧಿಕಾರಿ, 7 ಎಡ್ಜ್ ಮಂಗಳೂರು ರವರು ತೀರ್ಪುಗಾರರಾಗಿ ಸಹಕರಿಸಿದರು. ಕಾಲೇಜಿನ 23 ತಂಡಗಳು ಬಾಗವಹಿಸಿದ್ದವು. ಉಪಾನ್ಯಾಸಕಿ ಲಾರೈನ್ ಕಾರ್ಯಕ್ರಮ ನಿರೂಪಿಸಿದರು.ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಗಿರೀಶ್‌ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿವಿಲ್ ವಿಭಾಗದ ಸಹ ಪ್ರಾದ್ಯಾಪಕರಾದ ವಿನಯ್ ಮತ್ತು ರಾಮ್‌ಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದ್ದರು.