ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಕೃಷಿಗೆ ಹೊಸ ಆದಾಯದ ಮೂಲವಾದ ತಾಳೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯ

0

ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂಪನ್ಮೂಲ ವ್ಯಕ್ತಿಗಳಾದ ತೋಟದ ಮಾಲಿಕ ಪ್ರಗತಿಪರ ಕೃಷಿಕ ಹಾಗೂ ಮಾಜಿ ಸೈನಿಕ ಕಾಶಿಬೆಟ್ಟು ಕೃಷ್ಣ ಭಟ್ಟರು ಮಾಹಿತಿ ನೀಡಿದರು.

ತಾಳೆ ಕೃಷಿ ತೋಟಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳ ಬಳಿ ಭವಿಷ್ಯದಲ್ಲಿ ಭಾರತೀಯ ಕೃಷಿ ಕ್ಷೇತ್ರದಲ್ಲಿ ತಾಳೆ ಕೃಷಿ ಬಹು ಮುಖ್ಯ ಛಾಪು ಮೂಡಿಸಲಿದೆ,ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯದ ಮೂಲವಾಗಲಿದೆ ಎಂದು ಹೇಳಿದರು. ತಾಳೆ ಕೃಷಿ ಜೊತೆಗೆ ಅಡಿಕೆ ಬಾಳೆ ತೆಂಗು ಜೇನು ಸಾಕಾಣಿಕೆ ಮಾಹಿತಿಯನ್ನು ಒದಗಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್, ಇಕೋ ಕ್ಲಬ್ ಸಂಯೋಜನಾಧಿಕಾರಿ ವಾಣಿ ಎಂ.ಎಂ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here