ಬೆಳ್ತಂಗಡಿ: ದೆಹಲಿಯ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಸದಸ್ಯ ಧನ್ಯ ಕುಮಾರ್ ಜಿನ್ನಪ್ಪ ಗುಂಡೆ ಇವರನ್ನು ಭೇಟಿ ಮಾಡಿ ಅಲ್ಪಸಂಖ್ಯಾತ ಜೈನ ಧರ್ಮಿಯರ ಅಭಿವೃದ್ಧಿಯ ಬಗ್ಗೆ ಹಾಗೂ ಜಿನಮಂದಿರಗಳ ಅಭಿವೃದ್ಧಿ ಬಗ್ಗೆ ಚರ್ಚಿಸಿ, ಬಡವರಿಗೆ ಮನೆ ಕಟ್ಟಲು ಕಡಿಮೆ ಬಡ್ಡಿ ದರದಲ್ಲಿ ಸಾಲ, ಜಿಲ್ಲೆಗೆ ಒಂದು ಸಸ್ಯಹಾರಿ ವಿದ್ಯಾರ್ಥಿ ನಿಲಯ, ಜಿನಮಂದಿರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಂಪರ್ಕ, ರಸ್ತೆಗಳ ಅಭಿವೃದ್ಧಿ, ಜೈನ ಅಭಿವೃದ್ಧಿ ನಿಗಮ ರಚಿಸುವ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಆಡಳಿತ ಮಂಡಳಿಯ ವತಿಯಿಂದ ಮನವಿ ನೀಡಲಾಯಿತು.
ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಡಾ.ಕೆ.ಜಯಕೀರ್ತಿ ಜೈನ್ ಧರ್ಮಸ್ಥಳ, ಧನಕೀರ್ತಿ ಶೆಟ್ಟಿ, ಪಾರ್ಶ್ವನಾಥ ಜೈನ್, ಸುರೇಂದ್ರ ಕುಮಾರ್ ಶೆಟ್ಟಿ,ಸುನಿಲ್ ಕುಮಾರ್, ಅರಹಂತ ಜೈನ್ ಉಪಸ್ಥಿತರಿದ್ದರು.
p>