ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಳೆದ ಆರ್ಥಿಕ ವರ್ಷದಲ್ಲಿ ರೂ.95 ಕೋಟಿ 41 ಲಕ್ಷ ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ ಶೇ.98 ಸಾಲ ವಸೂಲಾತಿಯನ್ನು ಮಾಡಿ ರೂ.94 ಲಕ್ಷ 17 ಸಾವಿರ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 25% ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಲೆನ್ಸಿ ಪಿಂಟೊ ಹೇಳಿದರು.
ಸೆ.15ರಂದು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೆನ್ಸಿ ಪಿಂಟೋ, ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ನಡೆಸಿ ಅತ್ಯುತ್ತಮ ಲಾಭ ಗಳಿಸಿದೆ ಮತ್ತು 2023-24ನೇ ಆರ್ಥಿಕ ವರ್ಷದ ಲೆಕ್ಕಪರಿಶೋಧನೆಯಲ್ಲಿ ಸಂಘವನ್ನು ‘ಎ’ ವರ್ಗಕ್ಕೆ ವರ್ಗಿಕರಿಸಲಾಗಿದೆ. ಈ ಸಾಧನೆಗೆ ಬೆನ್ನೆಲುಬಾಗಿರುವ ಸಂಘದ ಸದಸ್ಯರು, ಪ್ರಾಮಾಣಿಕ ಸಿಬ್ಬಂದಿಗಳು, ಅತ್ಯುತ್ತಮ ಆಡಳಿತ ಮಂಡಳಿಯ ಸಹಕಾರದಿಂದ ಸಾಧ್ಯವಾಗಿದೆ. ಸದಸ್ಯರ ಸಲಹೆ ಸೂಚನೆಗಳು ಸಂಘದ ಪ್ರಗತಿಗೆ ಸಹಕಾರಿಯಾಗುತ್ತದೆ. ಟೀಕೆ ಟಿಪ್ಪಣಿಗಳನ್ನು ಎದುರಿಸಿ ಸಂಘ 9 ವರ್ಷಗಳಲ್ಲಿ ಉನ್ನತ ಮಟ್ಟದಲ್ಲಿ ಬೆಳೆದು ನಿಂತು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.
ಸಂಘದ ಗೌರವಾಧ್ಯಕ್ಷ ವ.ಫಾ.ಲಾರೆನ್ಸ್ ಮಸ್ಕರೇನ್ಹಸ್, ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರು ವ.ಫಾ.ಸ್ಟ್ಯಾನಿ ಗೋವಿಯಸ್, ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ ಕಂಡೆತ್ಯಾರು, ವೃತ್ತಿಪರ ನಿದೇರ್ಶಕರಾದ ಲಿಯೋ, ನೊರೊನಾ ಮತ್ತು ಫೆಲಿಕ್ಸ್ ಡಿ, ಕೊಸ್ತಾ, ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ಜೋಯಲ್ ಗೊಡ್ ಫ್ರೀ ಮೆಂಡೋನ್ಸಾ, ಗ್ರೆಗೋರಿ ಸೇರಾ, ರೊನಾಲ್ಡ್ ಸ್ವಿಕೇರಾ, ಸೆಲೆಸ್ತಿನ್ ಡಿಸೋಜಾ, ಗ್ರೇಸಿ ರೀಟಾ ರೆಬೆಲ್ಲೊ , ವ.ಫಾ. ಪ್ರವೀಣ್ , ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವ.ಫಾ. ದೀಪಕ್ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಲೇರಿಯನ್ ಡಿಸೋಜಾ ವರದಿ ವಾಚಿಸಿದರು. ನಿರ್ದೇಶಕರಾದ ಲಿಯೋ ರೊಡ್ರಿಗಸ್ ಸ್ವಾಗತಿಸಿ, ವಿವೇಕ್ ವಿನ್ಸೆಂಟ್ ಪಾಯ್ಸ್ ವಂದಿಸಿ, ಫ್ರಾನ್ಸಿಸ್ ವಿ.ವಿ. ನಿರೂಪಿಸಿದರು. ಸಿಬ್ಬಂದಿಗಳಾದ ಡೋನ್ ಪ್ರವೀಣ್ ಕ್ರಾಸ್ತಾ, ಶ್ವೇತಾ ರಾವ್, ಜೀವನ್, ರಮೇಶ್ ಹಾಗೂ ಅಲ್ವಿನ್ ಪಿಂಟೊ ಸಹಕರಿಸಿದರು.