ಮಚ್ಚಿನ: ಕುತ್ತಿನ ದತ್ತನಗರದ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ 12ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಸೆ.7ರಂದು ನಡೆಸಲಾಯಿತು.
ಬೆಳಿಗ್ಗೆ ಗಣಹೋಮ ಪೂಜೆ ಹಾಗೂ ಕ್ರೀಡಾಕೂಟವನ್ನು ಕುಮಾರಿ ಸೌಜನ್ಯರವರ ಪ್ರಾಥನೆಯೊಂದಿಗೆ, ಬಳ್ಳಮಂಜ ಮಾರಿಗುಡಿ ಪೆಟ್ರೋಲ್ ಪಂಪಿನ ಮಾಲಕರಾದ ಶ್ರೀಮತಿ ಮತ್ತು ಚಿತ್ತರoಜನ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಿದ್ದಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ದಿನೇಶ್ ಕುಲಾಲ್ ಕೊಂಬೆಟ್ಟು, ಪ್ರಗತಿ ಪರ ಕೃಷಿಕ ಕೃಷ್ಣ ಪ್ರಭು ಮುದಲಡ್ಕ, ವೆಂಕಪ್ಪ ಮೂಲ್ಯ ಕೊಂಬೆಟ್ಟು ಹಾಗೂ ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕಕರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು.ಆಟೋಟ ಸ್ಪರ್ಧೆಯ ತೀರ್ಪುಗರಾಗಿ ಮಚ್ಚಿನ ಮೊರಾರ್ಜಿ ದೇಸಾಯಿ ಶಾಲೆಯ ದೈಹಿಕ ಶಿಕ್ಷಕ ರಾಧಕೃಷ್ಣ, ವಿಶ್ವರಾಜ್, ಲೋಲಾಕ್ಷಿ ನೆರೆವೇರಿಸಿದರು.ಮದ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆದ ಸಮಾರಂಭ ಸಮಾರೋಪದ ಅಧ್ಯಕ್ಷ ದಿನೇಶ್ ಕುಲಾಲ್ ಕೊಂಬೆಟ್ಟು ಅಧ್ಯಕ್ಷ ಸ್ಥಾನ ವಹಿಸಿದರು.
ಮುಖ್ಯ ಅತಿಥಿಯಾಗಿ ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮುಕ್ತೇಸರ ರಾಜಶೇಖರ ಶೆಟ್ಟಿ, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರಮೋದ್ ಕುಮಾರ್ ಬಳ್ಳಮಂಜ ಹಾಗೂ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ್ ಬಿಎಸ್, ಗೋಪಾಲ ಪೂಜಾರಿ ಕೋಲಾಜೆ, ಜಯ ಪೂಜಾರಿ ಮುದಲಡ್ಕ, ಹೊನ್ನಪ್ಪ ಕುಲಾಲ್ ಮಾಣೂರು, ಸೇವಾಪ್ರತಿನಿಧಿ ಪರಮೇಶ್ವರ ಉಪಸ್ಥಿತರಿದ್ದರು.
ವೀರಕೇಸರಿ ಪ್ರೆಂಡ್ಸ್ ಬಳ್ಳಮಂಜದ ಆಂಬುಲೆನ್ಸ್ ಚಾಲಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ದೀಕ್ಷಿತ್ ಹಾಗೂ ಮಡಂತ್ಯಾರು ಮೆಸ್ಕಾಂ ಇಲಾಖೆಯಲ್ಲಿ ಮಚ್ಚಿನ ಗ್ರಾಮಕ್ಕೆ ಉತ್ತಮ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾದ ಸಚಿನ್ ಇವರಿಗೆ ಸನ್ಮಾನದೊಂದಿಗೆ ಗೌರವಿಸಲಾಯಿತು.
ಸನ್ಮಾನ ಪತ್ರವನ್ನು ದೀಪ್ತಿ ಕುತ್ತಿನ ಹಾಗೂ ನವನೀತಾ ಮುದಲಡ್ಕ ವಾಚಿಸಿದರು.ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷ ಪ್ರಭಾಕರ ಪೂಜಾರಿ ಸ್ವಾಗತಿಸಿ, ಕುಮಾರಿ ದೀಕ್ಷಾ ಕುತ್ತಿನ ಧನ್ಯವಾದ ನೀಡಿದರು.ಹರೀಶ್ ಶೆಟ್ಟಿ ಕುತ್ತಿನ ಕಾರ್ಯಕ್ರಮ ನಿರೂಪಿಸಿದರು.