


ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ವಲಯದ ಸತ್ಯನಪಲ್ಕೆ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡ ಮಾಡಿದ ಊಟದ ತಟ್ಟೆಗಳನ್ನು ಶಾಲಾ ಮಕ್ಕಳಿಗೆ ಈ ದಿನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಧರ್ನಮ್ಮ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಂತ್ ರಾವ್, ಒಕ್ಕೂಟ ಅಧ್ಯಕ್ಷ ಜಗನಾಥ್, ಸಂಪನ್ಮೂಲ ವ್ಯಕ್ತಿ ಉಷಾ, ವಿಚಕ್ಷಣಾಧಿಕಾರಿ ಶಿವರಾಮ್, ಸೇವಾಪ್ರತಿನಿಧಿ ಸುಜಾತ ಹಾಗೂ ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಊಟದ ತಟ್ಟೆಗಳನ್ನು ವ್ಯವಸ್ಥಿತವಾಗಿ ಜೋಡಣೆ ಮಾಡಿ ಇಡಲಾಯಿತು.ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯರು ಕೊಡಮಾಡುವ ಅನುದಾನಗಳ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಚಕ್ಷಣಾಧಿಕಾರಿ ಶಿವರಾಮ್ ರವರು ಮಾಹಿತಿ ನೀಡಿದರು.