ಕಲ್ಲೇರಿ: ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ವಾರ್ಷಿಕ ಸಾಮಾನ್ಯ ಸಭೆ- ಅಡಿಕೆ, ರಬ್ಬರ್ ಖರೀದಿಸಲಾಗವುದು: ಲಿಂಗಪ್ಪ ನಾಯ್ಕ್

0

ತಣ್ಣೀರುಪಂತ: ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ತಣ್ಣೀರುಪಂತ ಸೇವಾ ಸಹಕಾರಿ ಬ್ಯಾಂಕಿನ ನೂತನ ಕಟ್ಟಡದ ಸಭಾಂಗಣದಲ್ಲಿ ಆ.23ರಂದು ಅಧ್ಯಕ್ಷ ಲಿಂಗಪ್ಪ ನಾಯ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಲಿಂಗಪ್ಪ ನಾಯ್ಕ್ ಮಾತನಾಡಿ 2023 ಡಿ.19ರಂದು ಉದ್ಘಾಟನೆಗೊಂಡು ಸರಕಾರದ ಸಹಾಯಧನ ರೂ.10.50ಲಕ್ಷ ಮತ್ತು ಸ್ವಂತ ಬಂಡವಾಳದಿಂದ ಸ್ವಂತ ಕಟ್ಟಡವನ್ನು ನಿರ್ಮಿಸಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದೇವೆ.

2023-24ರ ಒಟ್ಟು ವ್ಯವಹಾರ ರೂ.1,90,88,394 ಕೋಟಿ ಆಗಿದ್ದು ಅದರಲ್ಲಿ ರೂ.3,12,779 ಲಕ್ಷ ಲಾಭ ಬಂದಿದೆ. ಪ್ರಸ್ತುತ ಆಡಳಿತ ಮಂಡಳಿಯು 8 ಜನ ನಿರ್ದೆಶಕರಿದ್ದು, 2 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಕಂಪೆನಿಗೆ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ನೋಣಯ್ಯ ಗೌಡ ಇವರು ಗೌರವ ಮಾರ್ಗದರ್ಶಕರಾಗಿರುತ್ತಾರೆ ಹಾಗೂ ಸುಬ್ರಹ್ಮಣ್ಯ ಕುಮಾರ್ ಆಗರ್ತ ಇವರನ್ನು ಕಂಪೆನಿಗೆ ಕಾನೂನು ಸಲಹೆಗರಾರನ್ನಾಗಿ ನೇಮಕ ಮಾಡಿಕೊಂಡಿರುತ್ತೇವೆ ಮತ್ತು ಹೊಸ ನಿರ್ದೇಶಕರಾಗಿ ಮಂಜುನಾಥ್ ಸಾಲಿಯನ್ ರವರನ್ನು ನೇಮಕ ಮಾಡಿದ್ದೇವೆ.

ಇನ್ನು ನಮ್ಮ ಕಂಪನಿಯಲ್ಲಿ ರಬ್ಬರ್ ಮತ್ತು ಅಡಿಕೆಯನ್ನು ಖರೀದಿಸಲಾಗುವುದು ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಾರಾಯಣ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು.ಹೆಚ್ಚು ವ್ಯವಹಾರ ಮಾಡಿದ ಸಂಸ್ಥೆಯ 10 ಸದಸ್ಯರನ್ನು ಗುರುತಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪುರಂದರ ಗೌಡ, ನಿರ್ದೇಶಕರಾದ ಜೋರಮ್ ಬ್ರಾಗ್ಸ್, ವಾಸಪ್ಪ ಗೌಡ, ಮೋನಪ್ಪ ಗೌಡ, ಸುಬ್ರಹ್ಮಣ್ಯ ರಾವ್, ಮಂಜುನಾಥ್ ಸಾಲಿಯಾನ್ ಉಪಸ್ಥಿತರಿದ್ದರು. ನಿರ್ದೇಶಕರಾದ ಯೋಗೀಶ್ ಪೂಜಾರಿ ಸ್ವಾಗತಿಸಿ, ತಿಮ್ಮಯ್ಯ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here