ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಿಂದ ನಡೆಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಯ ಸಿಬ್ಬಂದಿಗಳ ಸಭೆಯನ್ನು ಬೆಳ್ತಂಗಡಿ ಸಾನ್ ತೋಮರ್ ಟವರ್ ನಲ್ಲಿ ಆ.14ರಂದು ಆಯೋಜಿಸಿಲಾಗಿತ್ತು. ಕ್ರಾಸ್ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕ ವಂ.ಫಾ.ರಿಚರ್ಡ್ ಪಾಯಸ್ ರವರು ಸಮಾಲೋಚನೆ ಸಭೆ ನಡೆಸುತ್ತಾ ಯೋಜನೆಯ ಗುರಿ ಮತ್ತು ಉದ್ದೇಶಗಳು, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರ ಕ್ಷೇತ್ರದಲ್ಲಿ ನಡೆಸಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಕ್ರಾಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂ.ಫಾ.ರಿಚರ್ಡ್ ಪಾಯಸ್ ರವರು ಯೋಜನೆಯ ಮುಂದಿನ ದಿನಗಳಲ್ಲಿ ಉದ್ದೇಶಕ್ಕೆ ಅನುಗುಣವಾಗಿ ಕೆಲಸ ಮಾಡುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಕ್ರಾಸ್ ಸಂಸ್ಥೆಯ ರಾಜ್ಯ ಸಂಯೋಜಕಿ ಸಿಸ್ಟರ್ ನ್ಯಾನ್ಸಿ ಲೋಬೊ ರವರು ಯೋಜನೆಯ ಮೌಲ್ಯ ಮಾಪನ ಬಗ್ಗೆ ತಿಳಿಸಿದರು.
ಡಿ.ಕೆ.ಆರ್.ಢಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂ.ಫಾ.ಬಿನೋಯಿ ಎ.ಜೆ ರವರು ಮಹಿಳಾ ಸಬಲೀಕರಣ ಯೋಜನೆಗೆ ಕ್ರಾಸ್ ಸಂಸ್ಥೆ ವತಿಯಿಂದ ನೀಡುವ ಸಹಕಾರಕ್ಕೆ ಅಭಿನಂದಿಸಿದರು. ರಾಜ್ಯ ಸಂಯೋಜಕಿ ಲೈನಾ ಲಸ್ರಾದೊ ರವರು ಉಪಸ್ಥಿತರಿದ್ದರು. ಮಾರ್ಕ್ ಡಿ ಸೋಜ ರವರು ಎಲ್ಲರನ್ನು ಸ್ವಾಗತಿಸಿದರು. ಸುಶೀಲಾ ವಂದಿಸಿದರು. ಯೋಜನಾ ಸಂಯೋಜಕಿ ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು.