ತಾಲೂಕು ಮಟ್ಟದ ಚದುರಂಗ ಸ್ಪರ್ಧೆ- ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಮಡಂತ್ಯಾರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆ ಪೆರಿಂಜೆಯಲ್ಲಿ ಆಗಸ್ಟ್ 8ರಂದು ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯು ನಡೆಯಿತು.

ಈ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಹಂತದ ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯಾದ ಆದ್ಯ ಜೆ ರವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ನಮ್ಮ ಶಾಲಾ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜ ಮತ್ತು ಮಂಜುನಾಥರವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here