ಆ.16-17: ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಸ್ಯಾಭಿವೃದ್ಧಿ ಕುರಿತು ಸಾಂಸ್ಥಿಕ ತರಬೇತಿ

0

ಬೆಳ್ತಂಗಡಿ: ತೋಟಗಾರಿಕೆ ಬೆಳೆಗಳಲ್ಲಿ ಸಸ್ಯಾಭಿವೃದ್ಧಿ (ಕಸಿ ಕಟ್ಟುವ ವಿಧಾನ/ನರ್ಸರಿ ಟೆಕ್ನಿಕ್ಸ್) ಎಂಬ ವಿಷಯದ ಕುರಿತು ಆ.16-17ರಂದು ಜಿಲ್ಲಾ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಾಂಸ್ಥಿಕ ತರಬೇತಿ ಕಾರ್ಯಗಾರ ನಡೆಯಲಿದೆ.

ನಿವೃತ್ತ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಸಂಜೀವ ನಾಯ್ಕ್,ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಸುರ್ಯ ಹಾಗೂ ನವನೀತ ನರ್ಸರಿ ಪುತ್ತೂರು ಇಲ್ಲಿನ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಮೊಬೈಲ್ ತಂತ್ರಾಂಶವನ್ನು ಬಳಸುವ ಬಗ್ಗೆ ಮಾಹಿತಿ ನೀಡಲಾಗುವುದು.

ರೈತರು ಖಡ್ಡಾಯವಾಗಿ ಎಫ್‌ಐಡಿ ಅಥವಾ ಚುನಾವಣಾ ಗುರುತಿನ ಚೀಟಿಯನ್ನು ತರುಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

p>

LEAVE A REPLY

Please enter your comment!
Please enter your name here