ಕಣಿಯೂರು: ಪಿಲಿಗೂಡು ಮತ್ತು ಪದ್ಮುಂಜಕ್ಕೆ ಹೋಗುವ ರಸ್ತೆಯು ಬೊಳ್ಳರ ಮಜಲು ಎಂಬಲ್ಲಿ ಕುಸಿದು ಬಿದ್ದಿದ್ದು ತುಂಬಾ ಅಪಾಯಕಾರಿಯಾಗಿದೆ.ಸದ್ರಿ ಕಾಂಕ್ರೀಟ್ ರಸ್ತೆಯ ಅಡಿ ಬಾಗದ ಮಣ್ಣು ಮಳೆ ನೀರಿಗೆ ಕೊಚ್ಚಿಹೋಗಿದ್ದು ವಾಹನ ಸವಾರರು ಅರಿವಿಲ್ಲದೆ ವಾಹನ ಚಲಾಯಿಸಿದರೆ ಅಪಾಯ ತಪ್ಪಿದ್ದಲ್ಲ ಕಳೆದ ವರ್ಷದಿಂದಲೇ ಈ ರಸ್ತೆಯ ಅಪಾಯದ ಸೂಚನೆಯನ್ನು ಜನಪ್ರತಿನಿಧಿಗಳು ಗಮನಿಸಿದ್ದರೂ ಕೂಡ ದುರಸ್ತಿ ಪಡಿಸುವ ಬಗ್ಗೆ ಕಾಳಜಿ ವಹಿಸದಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಶೀಘ್ರವಾಗಿ ಸ್ಪಂದಿಸಿ ಆದಷ್ಟು ಬೇಗ ದುರಸ್ತಿ ಕಾರ್ಯ ನಡೆಸದಿದ್ದಲ್ಲಿ ಪದ್ಮುಂಜ ಕಣಿಯೂರು ಸಂಪರ್ಕ ರಸ್ತೆ ಕಡಿತವಾಗುವ ಭೀತಿಯಲ್ಲಿದೆ.
p>