ಪತ್ರಿಕಾಗೋಷ್ಠಿ: ಬೆಳ್ತಂಗಡಿ ಪ್ರವಾಸಿ ಬಂಗಲೆ ನೂತನ ಕಟ್ಟಡ ನಿರ್ಮಾಣದಲ್ಲಿ ಭಾರಿ ಭ್ರಷ್ಟಾಚಾರವಾಗಿದೆ: ರಕ್ಷಿತ್ ಶಿವರಾಮ್

0

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ರೂಪಾಯಿ 7 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿದರುವ ಪ್ರವಾಸಿ ಬಂಗಲೆಯಲ್ಲಿ (IB) ಬಾರಿ ಭ್ರಷ್ಟಾಚಾರ ನಡೆದಿದೆ. ಚುನಾವಣೆಯ ಸಂದರ್ಭ ತರಾತುರಿನಲ್ಲಿ ಉದ್ಘಾಟನೆ ನಡೆಸಿದರೂ ಈ ಕಟ್ಟಡ ಇದುವರೆಗೂ ಉಪಯೋಗಕ್ಕೆ ಬರುತ್ತಿಲ್ಲ. ಕಾಮಗಾರಿ ಮುಗಿದ ನಂತರವು 2 ಕೋಟಿ ರೂ. ಹೆಚ್ಚುವರಿ ಟೆಂಡರ್ ಕರೆದು ಭಾರಿ ಅವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಆರೋಪಿದರು.ಅವರು ಆ.5ರಂದು ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಈ ಬಂಗ್ಲೆಗೆ ಸುದೀರ್ಘ ಇತಿಹಾಸ ಇದ್ದು ಅದೆಷ್ಟೋ ಪ್ರವಾಸಿಗರಿಗೆ ಆಶ್ರಯ ತಾಣವಾಗಿತ್ತು.

2018ರ ನಂತರ ಅಭಿವೃದ್ಧಿಗೆ 13-07-2021ರಲ್ಲಿ ಐಬಿ ಟೆಂಡರ್ 4.76 ಕೋಟಿಗೆ ಬಿಮಲ್ ಗೆ ಟೆಂಡರ್ ಆಗಿತ್ತು. ಕಟ್ಟಡದಲ್ಲಿದ್ದ ಬೆಲೆ ಬಾಳುವ ವಸ್ತುಗಳಿಗೆ ಕೇವಲ 70,000ಕ್ಕೆ ಸಾಗಿಸಲಾಗಿದೆ.ಪುರಾತತ್ವ ಇಲಾಖೆಯ ಪರವಾನಗಿ ಇಲ್ಲದೆ ಐಬಿಯನ್ನು ಕೆಡವಿದ್ದಾರೆ. ಇಂತಹ ಕಟ್ಟಡ ತೆಗಯಲು ಕ್ಯಾಬಿನೆಟ್ ಅನುಮೋದನೆ ಬೇಕಿತ್ತು ಅದು ಇಲ್ಲದೆ ಕೆಡವಿದ್ದಾರೆ.ಉದ್ಘಾಟನೆಗೊಂಡ ನಂತರ ವರ್ಕ್ ಆರ್ಡರ್ ಪಡೆದು ಕಾಮಗಾರಿ ಮುಗಿದ ನಂತರ ಕಾಮಗಾರಿಗೆ ಅನುದಾನ ಎಲ್ಲಾ ಕೆಲಸ ಮುಗಿದ ನಂತರ ಮತ್ತೆ 2 ಕೋಟಿಯ ಟೆಂಡರ್ ನಡೆದಿದೆ.ಚುನಾವಣೆಗೆ ದುಡ್ಡು ಬೇಕು ಅನ್ನುವ ಕಾರಣಕ್ಕೆ ಮತ್ತೆ ಟೆಂಡರ್ ಆಗಿರುತ್ತದೆ.2023ರಲ್ಲಿ ಕೆಲಸ ಆರಂಭವಾಗುತ್ತದೆ, ಚುನಾವಣೆಯ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು.

ಗುತ್ತಿಗೆದಾರ ಸಂಸ್ಥೆ ಬಿಮಲ್ ನವರಿಗೆ ಮೂರು ನೋಟಿಸ್ ಕಳುಹಿಸಿದರೂ ಆಗದೆ ಅವರು ಜವಾಬ್ದಾರಿ ಅಂತ ಎಲ್ಲರೂ ಎಸ್ಕೇಪ್ ಆಗ್ತಿದ್ದಾರೆ.ಬಿಮಲ್ ನವರು ಕೆಲಸ ಮುಗಿಸಿರುವ ಪತ್ರವೇ ಬೋಗಸ್, ಸಿಎ ಅಡ್ರಸ್ ಹುಡುಕಿದಾಗ ಆತ ನಿವೃತ್ತಿಯಾಗಿ ಎಷ್ಟೋ ವರ್ಷಗಳಾಗಿದೆ.2018ರ ನಂತರ ಹೊಸ ಶಾಸಕರಾದ ನಂತರ ಹೆಚ್ಚಿನ ಕಾಮಗಾರಿಗಳು ಬಿಮಲ್ ಸಿಕ್ಕಿತು.

ಆ ಸಂದರ್ಭದಲ್ಲಿ ಬೆಳ್ತಂಗಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗಿಂತ ಜಾಸ್ತಿ ಬಿಮಲ್ ನ ಲಾರಿ ಓಡಾಟ ಮಾಡುತ್ತಿತ್ತು, ಆದರೆ ಇವತ್ತು ಬಿಮಲ್ ಎಲ್ಲಿ ಮಾಯವಾಗಿದೆ.ಉಜಿರೆಯ ಬಿಮಲ್ ಪ್ಲಾಂಟ್ ಮುಚ್ಚಿದ್ದಾರೆ.ಲೋಕಾಯುಕ್ತಕ್ಕೆ ದೂರು ನೀಡಿದವರಿಗೆ ಜೀವ ಬೆದರಿಕೆಯಿದೆ.ಐಬಿಯ ಬಾಗಿಲು ಓಪನ್ ಆಗ್ತಿಲ್ಲ, ಅಲ್ಲಿ ನಡೆಯುವುದು ಗುಪ್ತ ಮೀಟಿಂಗ್ ನಡೆಯುತ್ತದೆ ಎಂದು ಹೇಳಿದರು.

ಒಂದು ಕೋಟಿ ರೂಪಾಯಿಗೆ ನಿರ್ಮಾಣಗೊಂಡ ರೆಖ್ಯದ ದೇವಸ್ಥಾನ ತಡೆಗೋಡೆ ಕುಸಿದಿದೆ. ದೇವರ ದುಡ್ಡನ್ನು ಕೂಡ ಲೂಟಿ ಮಾಡಬಹುದು ಎಮದು ತೋರಿಸಿಕೊಟ್ಟಿದ್ದಾರೆ.ಈಗ ಮಳೆ‌ ಸಮಯದಲ್ಲಿ ನಿರಂತರ ಹೋರಾಟ ಮಾಡಿ, ಇಲ್ಲಿಯ ಜನತೆಗೆ ಕಷ್ಟದಲ್ಲಿ ಸೇವೆ ಮಾಡಲು ನನ್ನ ಕರ್ತವ್ಯ ಆಗಿದೆ.ಬಿಮಲ್ ನ ಪ್ರವೀಣ್ ಕುಮಾರ್ ಎಸ್ಕೇಪ್ ಆಗಿದ್ದಾನೆ ಈಗ ನಡೆಯುತ್ತಿರುವ ರಾಷ್ಟ್ರೀಯ ಗುತ್ತಿಗೆದಾರರ ಡಿಪಿ ಜೈನ್ ಕಂಪೆನಿ ಕೆಲವೇ ಗಂಟೆಗಳಲ್ಲಿ ಎಸ್ಕೇಪ್ ಆಗ್ತಾರೆ, ಶಾಸಕರು ಡಿಪಿ ಜೈನ್ ಕಂಪೆನಿಯಿಂದ 3 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೆಶ್ ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವಂದನಾ ಭಂಡಾರಿ, ನಮಿತಾ ತೋಟತ್ತಾಡಿ, ಜಿ.ಪಂ ಮಾಜಿ ಸದಸ್ಯರುಗಳಾದ ಶೇಖರ್ ಕುಕ್ಕೇಡಿ, ದರಣೇಂದ್ರ ಕುಮಾರ್ ಹಾಗು ಪಕ್ಷದ ಪ್ರಮುಖರಾದ ಸಂತೋಷ್ ಕುಮಾರ್ ಲಾಯಿಲ, ಅಬ್ದುಲ್ ಕರೀಂ, ಆಯಿಬು ಬಿ.ಕೆ, ಇಸ್ಮಾಯಿಲ್ ಪೆರಿಂಜೆ, ಹಕೀಂ ಕೊಕ್ಕಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here