ಚಾರ್ಮಾಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ಶಾರದ.ಎ ರವರ ಅಧ್ಯಕ್ಷತೆಯಲ್ಲಿ ಆ.05ರಂದು ಗ್ರಾ.ಪಂ ಸಭಾಭವನ ಚಾರ್ಮಾಡಿಯಲ್ಲಿ ಜರುಗಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಹಿಂದುಳಿದ ವರ್ಗ ಅಲ್ಪಸಂಖ್ಯಾತ ಇಲಾಖೆ ಸಹಾಯಕ ನಿರ್ದೇಶಕರು ಜೋಸೆಫ್ ಮುನ್ನಡೆಸಿದರು.ವೇದಿಕೆಯಲ್ಲಿ ಗ್ರಾ.ಪಂ. ಅದ್ಯಕ್ಷೆ ಶಾರದಾ ಎ, ಉಪಾಧ್ಯಕ್ಷರು ನೀಲು, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್, ಮ್ಯಾನೇಜರ್ ಧನಂಜಯ, ಧರ್ಮಸ್ಥಳ ಪೊಲೀಸ್ ಠಾಣೆಯ ಮಧು ಬಿ., ಸಿ.ಆರ್.ಪಿ ಪ್ರಶಾಂತ್ ಪೂಜಾರಿ, ಮೆಸ್ಕಾಂ ನ ಜೆಇ ಸುಭಾಷ್ ಎಸ್, ಗ್ರಾಮ ಆಡಳಿತಾಧಿಕಾರಿ ಹೆರಾಲ್ಡ್ ಮೋನಿಸ್, ಕಾರ್ಯದರ್ಶಿ ಕುಂಞ, ಗ್ರಾ.ಪಂ. ಸದಸ್ಯರುಗಳಾದ ಸದಾಶಿವ, ರೂಪ, ನಿಶಾಂತ್ ಕೆ, ಮಹಮ್ಮದ್ ಆಸೀಫ್, ಫ್ರಾನ್ಸಿಸ್, ಅಬ್ದುಲ್ ರಹೀಂ, ಮಂಜುಳಾ, ರವೀಂದ್ರ, ಪ್ರಿಯಾ, ನಾಗೇಶ, ಆಶಾಕಾರ್ಯಕರ್ತೆಯರು, ಇಲಾಖೆಯ ಅಧಿಕಾರಿಗಳು ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಗ್ರಾಮಸ್ಥರಿಂದ ಅರ್ಜಿಯನ್ನು ಸ್ವೀಕರಿಸಲಾಯಿತು ಹಾಗೂ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.
ನಾಡಗೀತೆ ಹೇಳಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ. ಸ್ವಾಗತಿಸಿ, ಅನುಪಾಲನಾ ವರದಿಯನ್ನು ಮತ್ತು ಜಮಾ-ಖರ್ಚು ಹಾಗೂ ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಗಳನ್ನು ಕಾರ್ಯದರ್ಶಿ ಕುಂಞ ಕೆ. ಓದಿದರು. ಅಭಿವೃದ್ಧಿ ಅಧಿಕಾರಿ ನಿರೂಪಿಸಿದರು.