ದೈಹಿಕ ಶಿಕ್ಷಕ ಜೋನ್ ಕೆ.ಪಿ ವೃತ್ತಿ ನಿವೃತ್ತಿ- ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೀಳ್ಕೊಡುಗೆ ಸನ್ಮಾನ

0

ನೆಲ್ಯಾಡಿ: ಬೆಳ್ತಂಗಡಿ ಹಳೆ ಪೇಟೆಯ ಸ. ಹಿ.ಪ್ರಾ. ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಸೇವೆಗೆ ಸೇರ್ಪಡೆಗೊಂಡು, ಸುದೀರ್ಘ ಮೂವತ್ತು ವರ್ಷಗಳ ಸೇವೆಯ ನಂತರ ಜುಲೈ 31ರಂದು ವಿದಾಯ ಹೇಳಿದ ಜೋನ್ ಕೆ.ಪಿ ಅವರನ್ನು, ಗೋಳಿತಟ್ಟು ಉ.ಹಿ.ಪ್ರಾ. ಶಾಲೆಯಿಂದ ನಿವೃತ್ತಿ ಪಡೆದ ಅವರನ್ನು, ಅವರ ಸ್ವಗೃಹದಲ್ಲಿ ಹಿರಿಯರ, ವೃತ್ತಿ ಬಾಂಧವರ, ನಾಡಿನ ಪ್ರಮುಖ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರು ವಂದನೀಯ ಶಾಜಿ ಮಾತ್ಯು ಅವರ ಸೇವೆಯನ್ನು ಪ್ರಶಂಸಿಸಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ, ವಿದಾಯದ ಸಂದರ್ಭದಲ್ಲಿ, ಶಿಕ್ಷಕರೊಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧಿಯ ಪುತ್ತಳಿಕೆಯನ್ನು ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಶಾಲಾ ವಠಾರದಲ್ಲಿ ಸ್ಥಾಪನೆ ಮಾಡಿರುವುದು, ಎಲ್ಲಾ ಸರಕಾರಿ ನೌಕರರಿಗೆ ಹೊಸದೊಂದು ಪರಿಕಲ್ಪನೆಗೆ ನಾಂದಿಯಾಗಿರುವುದು ಜೋನ್ ಕೆ ಪಿ ಅವರ ವಿಶೇಷ ಸಾಧನೆಯಾಗಿದೆ ಮತ್ತು ಅನುಕರಣೀಯ ಮಾದರಿಯಾಗಿದೆ.

ಈ ಸಂದರ್ಭದಲ್ಲಿ ಚರ್ಚ್‌ನ ಟ್ರಸ್ಟಿಗಳಾದ ನಿವೃತ್ತ ಸೈನಿಕ ಅಲೆಕ್ಸ್, ಪಾಲನ ಸಮಿತಿಯ ಜಿನೋಯ್ ಜಾರ್ಜ್, ಭಗೀನಿಯರಾದ ವಂದನೀಯ ಲಿಸ್ ಮಾತ್ಯು, ವಂದನೀಯ ಎಲ್ ಸ್ಲೀಟ್, ಹಿರಿಯ ಮುಖಂಡ ಕೆ.ಪಿ ತೋಮಸ್, ವಂದನೀಯ ಫಾ.ಜಿಬಿನ್ ಮೊದಲಾದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here