ಕೊಕ್ಕಡ: ಗ್ರಾ.ಪಂ. ನಿಂದ ಬ್ಯಾಂಕ್ ಹ್ಯಾಕರ್ ಗಳು ಹ್ಯಾಕ್ ಮಾಡಿ ಹಣ ಎಗರಿಸುವುದನ್ನು ತಡೆಯುವ ಸಲುವಾಗಿ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ತುರ್ತು ಸಭೆ

0

ಕೊಕ್ಕಡ: ಗ್ರಾಮ ಪಂಚಾಯತ್ ನ ತುರ್ತು ಸಭೆಯು ಗ್ರಾ.ಪಂ ಅಧ್ಯಕ್ಷೆ ಬೇಬಿಯವರ ಅಧ್ಯಕ್ಷತೆಯಲ್ಲಿ ಜು.31ರಂದು ಅಂಬೇಡ್ಕ‌ರ್ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಬ್ಯಾಂಕ್‌ ಹ್ಯಾಕರ್ ಗಳು ಹ್ಯಾಕ್ ಮಾಡಿ ಹಣ ಎಗರಿಸುವುದನ್ನು ತಡೆಯುವ ಸಲುವಾಗಿ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. ಬ್ಯಾಂಕ್ ನ ಗ್ರಾಹಕರಿಗೆ ಗ್ರಾಮಸ್ಥರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ ಹಾಗೂ ಗ್ರಾ.ಪಂ. ಕರಪತ್ರ ಮುದ್ರಿಸಿ ಹಂಚುವುದಾಗಿ ತಿಳಿಸಲಾಯಿತು.

ಮುಂದೇ ಹಣ ಕಳಕೊಂಡ ಗ್ರಾಹಕರು ಕೂಡಲೇ ಸಂಬಂಧಪಟ್ಟ ಬ್ಯಾಂಕ್, ಬೀಟ್ ಪೊಲೀಸರಿಗೆ ಕಂಪ್ಲೇಟ್ ಮಾಡುವುದು ನಂತರ ಪಂಚಾಯತ್ ಗೆ ತಿಳಿಸಬೇಕೆಂದು ಸಭೆಯಲ್ಲಿ ವ್ಯಕ್ತವಾಯಿತು.

ಈ ವೇಳೆ ಕೊಕ್ಕಡ ಕೆನರಾ ಬ್ಯಾಂಕ್ ಮೇನೇಜ‌ರ್, ಅಸಿಸ್ಟೆಂಟ್ ಮ್ಯಾನೇಜರ್ ಗಣೇಶ್, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖಾ ಮಾನೇಜ‌ರ್, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖಾ ಮಾನೇಜ‌ರ್, ಕೊಕ್ಕಡ ಎಸ್‌.ಸಿ.ಡಿ.ಸಿಸಿ ಬ್ಯಾಂಕ್ ಮೇನೇಜರ್, ಬೀಟ್ ಪೊಲೀಸ್, ಅಲ್ಲದೇ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಗೌಡ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ನಿಕಟಪೂರ್ವಾಧ್ಯಕ್ಷ ಯೋಗೀಶ್‌ ಆಲಂಬಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here