


ಬೆಳ್ತಂಗಡಿ: ತಾಲೂಕಿನ ಕುತ್ಲೂರು ಗ್ರಾಮದ ಶಾಲೆಯ ಬಳಿ ಅನುಮಾನಾಸ್ಪದ ವ್ಯಕ್ತಿ ಕತ್ತಿ ಹಾಗೂ ಚಾಕು ಹಿಡಿದುಕೊಂಡು ಓಡಾಟ ನಡೆಸುತ್ತಿರುವ ಘಟನೆ ನ. 4ರಂದು ರಾತ್ರಿ ನಡೆದಿದೆ.
ಈ ವ್ಯಕ್ತಿ ಆರಂಭದಲ್ಲಿ ಕುತ್ಲೂರು ಪೇಟೆಯ ಸಮೀಪ ಕಾಣಿಸಿಕೊಂಡಿದ್ದಾನೆ. ಆತನನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾನೆ ಆದರೆ ಆ ವ್ಯಕ್ತಿ ತುಳುವಿನಲ್ಲಿ ಮಾತನಾಡಿದ್ದು, ತಾನು ರಬ್ಬರ್ ಟ್ಯಾಪಿಂಗ್ ಬಂದಿರುವುದಾಗಿ ಹೇಳಿದ್ದಾನೆ. ಬಳಿಕ ಈತ ಅಂಗಡಿ ಬಳಿಯಲ್ಲಿ ಈತ ನಿಂತಿರುವುದನ್ನು ನೋಡಿದಾಗ ಆತ ಸೊಂಟದಲ್ಲಿ ಕತ್ತಿ ಇರಿಸಿಕೊಂಡಿರುವುದು ನೋಡಿ ಇದನ್ನು ಪ್ರಶ್ನಿಸಿದಾಗ ಆತ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ.


ಸ್ಥಳೀಯರು ವ್ಯಕ್ತಿಯನ್ನು ನೋಡಿ ಆತಂಕಗೊಂಡು ತಕ್ಷಣ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೀಗ ಊರವರು ಮತ್ತು ಪೊಲೀಸರು ಅನುಮಾನಾಸ್ಪದ ವ್ಯಕ್ತಿಯನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

ಕುತ್ಲೂರಿನ ಆಸುಪಾಸಿನ ಜನರನ್ನು ಎಚ್ಚರಿಕೆಯಿಂದ ಇರಲು ಪೊಲೀಸರು ಮನವಿ ಮಾಡಿದ್ದಾರೆ. ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ತಿಳಿಸಿದ್ದಾರೆ.









