


ಶಿಬಾಜೆ: ರೆಖ್ಯ ಗ್ರಾಮದ ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗುಡ್ಡ ಕುಸಿದು ಹಾನಿಯಾಗಿದೆ.

ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ದೇವಳ ಹಿಂಭಾಗದ ಬೃಹತ್ ಗುಡ್ಡ ಜರಿದಿದೆ. ದೇವಸ್ಥಾನದ ಆವರಣದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು, ದೇವರ ಗರ್ಭಗುಡಿ ಹಾಗೂ ಸುತ್ತುಪೌಳಿಗೆ ಹಾನಿಯಾಗಿದೆ.