ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಅಧ್ಯಕ್ಷ ದಿವಾಕರ ಮೆದಿನ ಅಧ್ಯಕ್ಷತೆಯಲ್ಲಿ ಆ.1ರಂದು ಕಳಿಯ ಸಹಕಾರಿ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ವಲಯ ಸಾಮಾಜಿಕ ಅರಣ್ಯ ಇಲಾಖೆಯ ಆರ್ ಎಫ್ ಓ ವಿದ್ಯಾ ಸಭೆಯನ್ನು ಮುನ್ನಡೆಸಿದರು.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಪೃಥ್ವಿ, ಶಿಕ್ಷಣ ಇಲಾಖೆಯ ಸಿಆರ್ ಪಿ ರಾಜೇಶ್, ಸಾಕ್ಷರತಾ ಇಲಾಖೆಯ ಉಷಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪದ್ಮಾವತಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ನಿವೃತ್ತಿ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಮತ್ತು ಅಂಚೆ ಮಾಸ್ಟರ್ ಡಾಕಯ್ಯ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ಇಂದಿರಾ, ಸದಸ್ಯರುಗಳಾದ ವಿಜಯ ಕುಮಾರ್, ಸುಭಾಷಿಣಿ ಜನಾರ್ದನ ಗೌಡ, ಕುಸುಮ ಎನ್.ಬಂಗೇರ, ಸುಧಾಕರ ನಾಯ್ಕ್, ಅಬ್ದುಲ್ ಕರೀಂ, ಹರೀಶ್ ಕುಮಾರ್ ಬಿ, ಯಶೋಧರ ಶೆಟ್ಟಿ ಕೆ., ಲತೀಫ್, ಮರೀಟಾ, ಮೋಹಿನಿ ಬಿ.ಗೌಡ, ಪುಷ್ಪಲತಾ, ಶ್ವೇತಾ ಶ್ರೀನಿವಾಸ್ ಹಾಗೂ ಶಕುಂತಲಾ ಉಪಸ್ಥಿತರಿದ್ದರು. ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಸಂಘದ ನಿರ್ದೇಶಕಕಾದ ಬಾಲಕೃಷ್ಣ ಗೌಡ ಬಿ, ಉದಿತ್ ಕುಮಾರ್ ಬಿ, ಕುಶಾಲಪ್ಪ ಗೌಡ ಕೆ, ಕೇಶವ ಪೂಜಾರಿ ಕೆ,. ಸಹಿತ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.