ವೇಣೂರು: ಲಯನ್ಸ್ ಕ್ಲಬ್ ವೇಣೂರು ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗ ಪದಗ್ರಹಣ ಸಮಾರಂಭ ಜು.25ರಂದು ವೇಣೂರು ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷ ನಿರಂಜನ್ ಕೆ.ಎಸ್. ವಹಿಸಿದ್ದರು.
ನೂತನ ಅಧ್ಯಕ್ಷ ಹರೀಶ್ ಕುಮಾರ್ ತಂಡದ ಬಳಗದ ಪದಾಧಿಕಾರಿಗಳಿಗೆ ಜಿಲ್ಲಾ ಚೀಫ್ ಕೋಡಿನೇಟರ್ ವಿಜಯ ವಿಷ್ಣು ಮಲ್ಯ ಪದ ಪ್ರಧಾನ ನೆರವೇರಿಸಿ ಶುಭ ಹಾರೈಸಿದರು.ಪ್ರಾಂತೀಯ ಅಧ್ಯಕ್ಷ ವೇಕಟೇಶ್ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ವಲಯದ ವಿವಿಧ ಕ್ಲಬ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಪದ ಪ್ರಧಾನ ಸ್ವೀಕರಿಸಿದ ನೂತನ ಅಧ್ಯಕ್ಷ ಹರೀಶ್ ಕುಮಾರ್ ಮುಂದಿನ ವಿವಿಧ ಹೊಸ ಯೋಜನೆಗಳನ್ನು ಪ್ರಸ್ತಾಪಿ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು.
ಸನ್ಮಾನ: ವೇಣೂರಿನ ವೈದ್ಯರುಗಳಾದ ಡಾ.ಕೆ.ಆರ್.ಪ್ರಸಾದ್, ಕ್ಲಬಿನ ಸ್ಥಾಪಕ ಸದಸ್ಯ ಡಾ.ಜಗದೀಶ್ ಚೌಟ, ಡಾ.ಶಾಂತಿಪ್ರಸಾದ್, ಡಾ.ಸಂತೋಷ್ ರೆಗೋ ಇವರನ್ನು ಹಾಗೂ ಶೈಕ್ಷಣಿಕ ಸಾಧನೆಗೈದ ವೇಣೂರು ಆಸುಪಾಸಿನ ಪ್ರೌಢ ಶಾಲಾ ವಿದ್ಯಾರ್ಥಿಗಳಾದ ನಿಶಾಂತ್ ಎಸ್.ರಾವ್ ಕುಂಭಶ್ರೀ, ಪ್ರಣೀಶ್ ವಿದ್ಯೋದಯ, ಲಿಖಿಕಾ ಸ.ಪ್ರೌಢ ಶಾಲೆ, ತೇಜಸ್ವಿನಿ ಸ.ಪ್ರೌಢ ಶಾಲೆ ಕನ್ನಡ ಮಾಧ್ಯಮ, ವೇಣೂರು ನವಚೇತನ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿ ವಿಯೋನ ಪ್ಲಾವಿಯಾ ಮೊರಾಸ್ ಇವರುಗಳನ್ನು ಸನ್ಮಾನಿಸಲಾಯಿತು.
ವಿಶೇಷ ಸೇವಾ ಯೋಜನೆಯ ಅಂಗವಾಗಿ ಪಡ್ಕಂದಡ್ಕ ಶಾಲೆಗೆ ಬರೆಯುವ ಪುಸ್ತಕ, ಗುಂಡೂರಿ ಶಾಲೆಗೆ ಸಮವಸ್ತ್ರ, ವೇಣೂರು ಸರಕಾರಿ ಪ್ರೌಢ ಶಾಲಾ ಅಭಿವೃದ್ಧಿಗೆ ಸಹಾಯಧನ, ಅಂಡಿಂಜೆ ಶಾಲೆಗೆ ಗ್ರೈಂಡರ್, ಬಜಿರೆ ಶಾಲೆಗೆ ಶೀಟ್ ಅಳವಡಿಸಲು ಸಹಾಯಧನ, ವಿದ್ಯೋದಯ ಶಾಲೆಗೆ ಸಹಾಯಧನ ನೀಡಲಾಯಿತು.
ಕಾರ್ಯದರ್ಶಿ ಹಾಗೂ ನೂತನ ಕೋಶಾಧಿಕಾರಿ ದಯಾನಂದ ಭಂಡಾರಿ ವರದಿ ವಾಚಿಸಿದರು. ಭಾಸ್ಕರ ಪೈ, ಸೀತಾರಾಮ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ನಿತೀಶ್ ಹೆಚ್., ಸುಧೀರ್ ಭಂಡಾರಿ, ಸತೀಶ್ ಚಿಗುರು ಸನ್ಮಾನಿತರ ಪರಿಚಯಿಸಿದರು.
ಜಗದೀಶಚಂದ್ರ ಡಿ.ಕೆ. ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಜಯರಾಜ ಹೆಗ್ಡೆ ವಂದಿಸಿದರು.