



ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಉಜಿರೆ ವಲಯದ, ಬೆಳಾಲು- ಮಾಯಾ ಕಾರ್ಯಕ್ಷೇತ್ರದ ಹೊಸಕಿರಣ ಸಂಘದ ಸದಸ್ಯ ಕೃಷ್ಣಪ್ಪ ಗೌಡರ ಅಕ್ಕ ಚೆಲುವಮ್ಮರವರಿಗೆ ವಿಶೇಷವಾಗಿ ಯು ಶೇಪ್ ವಾಕರ್ ಗೆ ಬೇಡಿಕೆ ನೀಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುತ್ತಾರೆ.


ಸದ್ರಿಯವರಿಗೆ ಮಂಜೂರಾದ ಯು ಶೇಪ್ ವಾಕರನ್ನು ಬೆಳಾಲು ಒಕ್ಕೂಟದ ಉಪಾಧ್ಯಕ್ಷ ಶೌರ್ಯ ಸ್ವಯಂ ಸೇವಕ ಪ್ರಸಾದ, ಜೊತೆ ಕಾರ್ಯದರ್ಶಿ ಸುಮಿತ್ರಾರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಸೇವಾ-ಪ್ರತಿನಿಧಿ ತಾರಾನಾಥ, ಶೌರ್ಯ ಸ್ವಯಂ ಸೇವಕ ಸುಮಂತ್ ಉಪಸ್ಥಿತರಿದ್ದರು.









