ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಮಾಸ್ಟರ‍್ಸ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿಗಳಿಗೆ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಪರೀಕ್ಷೆ ಬರೆಯಲು ಖಾಯಂ ತರಗತಿಗಳ ಮೂಲಕ ಕೋಚಿಂಗ್ ನೀಡುತ್ತಾ ಯಶಸ್ವಿಯಾಗಿ 23ನೇ ವರ್ಷಕ್ಕೆ ಮುನ್ನಡೆಯುತ್ತಾ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡದಿಂದ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಹತ್ತಿರದ ಸೋಮಸ್ಮೃತಿ ಕಟ್ಟಡದ ಮೊದಲನೇ ಮಹಡಿಗೆ ಸ್ಥಳಂತರಗೊಂಡಿದೆ.
ಸಂಸ್ಥೆಯಲ್ಲಿ ಸಂಜೆಯ ವೇಳೆಗೆ 1ನೇ ತರಗತಿಯಿಂದ ಡಿಗ್ರಿಯ ವರೆಗಿನ ತರಗತಿಗಳಿಗೆ ಟ್ಯೂಷನ್ ಅಲ್ಲದೆ ಸ್ಪೋಕನ್ ಇಂಗ್ಲಿಷ್ ಬ್ಯಾಚ್ ಗಳು ಮತ್ತು ಪಿಯುಸಿ ಮತ್ತು ಡಿಗ್ರಿಯ ಲೆಕ್ಕ ಶಾಸ್ತ್ರ ವಿಷಯಗಳಿಗೂ ಸಂಜೆ ಮತ್ತು ವಾರಂತ್ಯದ ಟ್ಯೂಷನ್ ಲಭ್ಯವಿದೆ.ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಿ ವ್ಯಕ್ತಿತ್ವ ವಿಕಾಸನಕ್ಕೆ ಅವಕಾಶ ಮಾಡಿ ಕೊಡುವ ದೃಷ್ಟಿಯಿಂದ ವಿಶೇಷ ತರಗತಿಗಳನ್ನು ಸಹ ಆಯೋಜಿಸಲಾಗುತ್ತದೆ.ಜೇಸಿಐ ಇಂಡಿಯಾದ ವಲಯ ತರಬೇತುದಾರರಿಂದ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ