ಉಜಿರೆ: ಇತ್ತೀಚಿನ ದಿನಗಳಲ್ಲಿ ಭಾರಿ ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್ಇಡಿ ಬಲ್ಟ್ ಅಳವಡಿಸಲಾಗುತ್ತಿದೆ. ಇದರಿಂದ ಎದುರು ಬರುವ ವಾಹನಗಳಿಗೆ ತೊಂದರೆ ಆಗಿ ರಸ್ತೆ ಅಪಘಾತ ಹೆಚ್ಚಳವಾಗುತ್ತಿದೆ. ವಾಹನಗಳಿಗೆ ಎಲ್ಇಡಿ ಲೈಟ್ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಜುಲೈ 1ರಿಂದಲೇ ಕೇಸ್ ಬೀಳಲಿದೆ ಎಂದು ತಿಳಿಸಿದ್ದರು.
ಮತ್ತೆ ಹಾಕಿರುವ ವಾಹನಗಳನ್ನು ನಿಲ್ಲಿಸಿ ಎಸ್ ಐ ಅರ್ಜುನ್ ಹಾಗೂ ಎ ಎಸ್ ಐ ರಾಮಚಂದ್ರ ಬೆಳ್ತಂಗಡಿ ಸಂಚಾರ ಠಾಣೆ ವತಿಯಿಂದ ಎಲ್ ಇಡಿ ಲೈಟ್ ಅಳವಡಿಸಿದ ವಾಹನಗಳನ್ನು ಪತ್ತೆ ಹಚ್ಚಿ ಜು.2ರಂದು ರಾತ್ರಿ ಉಜಿರೆ ಕಾಲೇಜು ರಸ್ತೆಯ ಡಿವೈಡರ್ ಎರಡು ಭಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿ ದಂಡ ವಿಧಿಸಲಾಯಿತು. ಅನೇಕ ಸಿಬ್ಬಂದಿಗಳು ಹಾಜರಿದ್ದರು.
p>