

ಕಾಯರ್ತಡ್ಕ: ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ನ ರಚನೆಯು ಜೂ.26ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಮಹಾಬಲ ನಿವೃತ್ತ ಸುಬೇದಾರ್ ಭಾರತೀಯ ಸೇನೆ ಹಾಗೂ ಶಾಲಾ ಸಂಚಾಲಕಿ ಸಿಸ್ಟರ್ ಮರ್ಸಿ ಚೆರಿಯನ್ ಹಾಗೂ ಮುಖ್ಯ ಶಿಕ್ಷಕಿ, ಸಿಸ್ಟರ್ ದಿವ್ಯ ಮರಿಯ.ಎಸ್ ಹೆಚ್ ರವರು ಉಪಸ್ಥಿತರಿದ್ದರು.
ವಿದ್ಯುನ್ಮಾನ ಮತ ಯಂತ್ರದ ಮೊಬೈಲ್ ಆಪ್ ಬಳಸಿ ಮಂತ್ರಿಗಳನ್ನು ಆಯ್ಕೆ ಮಾಡಲಾಗಿತ್ತು.ಇದರ ಉಸ್ತುವಾರಿಯನ್ನು ಮುಖ್ಯ ಶಿಕ್ಷಕಿ ದಿವ್ಯ ಮರಿಯ ಎಸ್.ಹೆಚ್ ಹಾಗೂ ಸಹ ಶಿಕ್ಷಕಿ ಪುಷ್ಪಾ.ಬಿ ವಹಿಸಿದ್ದರು.
ಮುಖ್ಯ ಅತಿಥಿಗಳಾದ ಕೆ.ಮಹಾಬಲ ರವರು ಹಾಗೂ ಸಿಸ್ಟರ್ಸ್ ಶಾಲಾ ಸಂಸತ್ತನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಮುಖ್ಯ ಶಿಕ್ಷಕಿ ಸಿಸ್ಟರ್ ದಿವ್ಯ ಮರಿಯರವರು ನೂತನ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಶಾಲಾ ಮುಖ್ಯಮಂತ್ರಿಯಾಗಿ ಡ್ಯಾನಿಶ್.ಎನ್ 10ನೇ, ಉಪಮುಖ್ಯಮಂತ್ರಿಯಾಗಿ ವೃಷ್ಠಿ 9ನೇ, ಶೈಕ್ಷಣಿಕ ಮಂತ್ರಿಗಳಾಗಿ ಪ್ರಿನ್ಸ್ 9ನೇ ಹಾಗೂ ವೃಕ್ಷ 8ನೇ, ಆರೋಗ್ಯ ಮಂತ್ರಿಗಳಾಗಿ ಆಲ್ವಿನ್ ಥಾಮಸ್ 9ನೇ ಹಾಗೂ ಅನ್ವಿತಾ 8ನೇ, ಕ್ರೀಡಾ ಮಂತ್ರಿಗಳಾಗಿ ಗಹನ್.ಎಸ್.ಶೆಟ್ಟಿ 9ನೇ ಹಾಗೂ ದೀಕ್ಷಾ 8ನೇ, ಶಿಸ್ತು ಮಂತ್ರಿಗಳಾಗಿ ತನ್ವಿ 9ನೇ ಹಾಗೂ ಅನ್ಸಿಲ 8ನೇ ತರಗತಿಯವರು ಆಯ್ಕೆಗೊಂಡರು.
ಶಾಲಾ ವಿದ್ಯಾರ್ಥಿನಿಯರಾದ ವಿಬಿನ ಮ್ಯಾಥ್ಯೂ ಹಾಗೂ ಶ್ರಾವ್ಯ 10ನೇ ತರಗತಿ ನಿರೂಪಿಸಿ, ದಿಶಾ ಸ್ವಾಗತಿಸಿ, ಶ್ರೇಯ ಧನ್ಯವಾದವಿತ್ತರು.