ನಡ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿ ವತಿಯಿಂದ ಕೆ.ವಸಂತ ಬಂಗೇರರಿಗೆ ನುಡಿನಮನ

0

ನಡ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿ ವತಿಯಿಂದ ಕೆ.ವಸಂತ ಬಂಗೇರರಿಗೆ ನುಡಿನಮನ ಜೂನ್ 2ರಂದು ನಡ ಗ್ರಾಮದ ಶ್ರೀ ಗುರು ನಾರಾಯಣ ಸ್ವಾಮಿ ಮಂದಿರದಲ್ಲಿ ಮಾಸಿಕ ಭಜನೆ ಗುರುಪೂಜೆಯ ನಂತರ ಬಿಲ್ಲವ ಸಮಾಜದ ಹಿರಿಯ ನಾಯಕರಾದ ಅಪರೂಪದ ಮಾಣಿಕ್ಯ ಕೆ.ವಸಂತ ಬಂಗೇರರಿಗೆ ನುಡಿನಮನ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರು ಎಮ್ ಕೆ ಪ್ರಸಾದ್, ಗು.ಸ್ವಾ ಸೇವಾ ಸಮಿತಿ ಅಧ್ಯಕ್ಷರು ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ, ಉಪಾಧ್ಯಕ್ಷ ದಿವಾಕರ ಸಾಲ್ಯಾನ್ ಸುರ್ಯ, ಜಯಕುಮಾರ್ ಸುರ್ಯ, ದೇವೇಂದ್ರ ಪೂಜಾರಿ ಕುದುಪುಲ, ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ನಿರ್ದೇಶಕ ಆದರ್ಶ್ ನೂಚಿಲ, ವಸಂತಿ ವಸಂತ ಕುತ್ರೊಟ್ಟು ಮತ್ತು ಎಲ್ಲಾ ಪದಾಧಿಕಾರಿಗಳು, ಗೌರವ ಸಲಹೆಗಾರರು, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ವೀರಪ್ಪ ಪೂಜಾರಿ ಇವರು ಸರ್ವರನ್ನೂ ಸ್ವಾಗತಿಸಿ, ದಿವಾಕರ ಸುರ್ಯ ವಂದಿಸಿದರು. ಮೀನಾಕ್ಷಿ ಕೆ ಭಂಡಾರಿಕೋಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here